Showing posts with label ಜಾಣಿ ಕಲ್ಯಾಣಿ ಸುಂದರವಾಣಿ ಪನ್ನಂಗ ವೇಣಿಜಾಣಿ ಹೇಳಮ್ಮ ramesha. Show all posts
Showing posts with label ಜಾಣಿ ಕಲ್ಯಾಣಿ ಸುಂದರವಾಣಿ ಪನ್ನಂಗ ವೇಣಿಜಾಣಿ ಹೇಳಮ್ಮ ramesha. Show all posts

Wednesday, 4 August 2021

ಜಾಣಿ ಕಲ್ಯಾಣಿ ಸುಂದರವಾಣಿ ಪನ್ನಂಗ ವೇಣಿಜಾಣಿ ಹೇಳಮ್ಮ ankita ramesha

 ..

ಜಾಣಿ ಕಲ್ಯಾಣಿ ಸುಂದರವಾಣಿ ಪನ್ನಂಗ ವೇಣಿಜಾಣಿ ಹೇಳಮ್ಮ ಹೋಗಿ ಕಾಣಿ ನಿನ್ನಂಥವಳ ಪ.


ಮುದ್ದು ರುಕ್ಮಿಣಿಯು ದೂತೆಗೆ ತಿದ್ದಿ ಮಾತುಗಳ ಹೇಳಿ ಬುದ್ಧಿವಂತಳೆ ರಾಯಗ ಸುದ್ದಿ ಹೇಳಮ್ಮ ಹೋಗಿ1

ಮಾನ ಮಾಡಿ ದೂತೆಗೆ ಆನೆ ಅಂಬಾರಿ ಕೊಟ್ಟುನಾನಾ ಭೂಷಣಗಳಿಟ್ಟು ತಾನು ವಸ್ತ್ರಗಳನೆ ಕೊಟ್ಟು2

ಹರದಿ ರುಕ್ಮಿಣಿಯು ದೂತೆಗೆ ತುರಗ ಬಿರುದುಗಳೆ ಕೊಟ್ಟುಎರಗಿ ಹೇಳಮ್ಮ ಅಷ್ಟು ಹಿರಿತನಗಳಟ್ಟು 3

ರಂಗ ಬಂದಿಳಿದಾನೆಂಬೊ ಮಂಗಳವಾರ್ತೆಯಸಂಗೀತಲೋಲರಾಯನ ತಂಗಿಗ್ಹೇಳಮ್ಮ ಹೋಗಿ 4

ಭರದಿ ದ್ರೌಪತಿಗೆ ಮುಯ್ಯಾ ತಿರುಗಿಸಿ ತಂದಾರೆಂದು ಎರಗಿ ಹೇಳಮ್ಮ ಮೈಯ್ಯ ಮರೆತಿರಬ್ಯಾಡಿರೆಂದು5

ಮಂದಗಮನೆಯರು ಮುಯ್ಯ ತಂದಾರೆ ತಾರಾರೆಂದು ಸಂದೇಹ ಬಿಟ್ಟು ಊಟ ಚಂದಾಗಿ ಮಾಡಿರೆಂದು6

ಧೀರರಾಯಗೆ ಮುಯ್ಯ ನಾರಿಯರು ತಂದಾರೆಂದು ಬಾರಿ ಬಾರಿಗೆ ನಮಿಸಿ ಸಾರಿ ಹೇಳಮ್ಮ ಹೋಗಿ 7

ಧಿಟ್ಟೆಯರು ಮುಯ್ಯ ಉತ್ಕøಷ್ಟದಿ ತಂದಾರೆಂದು ಕೃಷ್ಣರಾಯನ ಬಂದದ್ದಷ್ಟು ಹೇಳಮ್ಮ ಹೋಗಿ8

ಇಂದು ರಾಮೇಶನ ಮಡದಿಯರು ಬಂದರು ದ್ವಾರದಿ ಒಂದೊಂದು ಮಾತುರಾಯಗೆ ಚಂದಾಗಿ ಹೇಳಮ್ಮ ಹೋಗಿ9

****