ಅಸೂರಿ ರಾಮಸ್ವಾಮಿಅಯ್ಯಂಗಾರ್
ನಗುವಿನಿಂದಾರೋಗ್ಯ ಉಂಟೆಂಬರಯ್ಯ ನಗುವಿನಲಿ ಹಲವಾರು ಬಗೆಗಳುಂಟಯ್ಯ ಪ
ನಗುವಿಂದ ಸನ್ಮಿತ್ರ ಹಗೆಯಪ್ಪುದುಂಟಯ್ಯ ನಗುತ ಬಾಳೆಂಬುದೇ ಸೊಗವೋ ರಂಗಯ್ಯ ಅ.ಪ
ಗೊಳ್ಳೆಂಬ ನಗೆಯುಂಟು ಬಲ್ಲವನ ಸಭೆಯಲಿ ಕಳ್ಳನಗೆಯೊಂದುಂಟು ಪೊಳ್ಳುಕಡೆಗಳಲಿ ಸುಳ್ಳುನಗೆಯೊಂದುಂಟು ಜಳ್ಳು ಡಾಂಭಿಕರಲಿ ಮುಳ್ಳುಕಲ್ ನಗೆಯುಂಟು ಕಳ್ಳಕಾಕರಲಿ 1
ನಸುನಗೆಯು ಮನದ ಸಂತಸದ ಕುರುಹು [ಎಸೆ]ವ ರಸನೆ ನಗುವುದೇ ಹಾಸ್ಯವಯ್ಯಾ ರಸಪೂರ್ಣ ನಗುವುಂಟು ಬಿಸಜಾಕ್ಷನಲ್ಲಿ ಹೊಸದಾದ ನಗು ಮಾಂಗಿರಿನಲವಿನಲಿ2
***