Showing posts with label ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯ purandara vittala. Show all posts
Showing posts with label ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯ purandara vittala. Show all posts

Thursday 5 December 2019

ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯ purandara vittala

ಪುರಂದರದಾಸರು
ನಿನ್ನ ನಂಬಿದೆನೊ ನೀಯೆನ್ನ ಸಲಹಯ್ಯಎನ್ನ ಗುಣದೋಷಗಳ ಎಣಿಸಬೇಡಯ್ಯ ಪ

ಬಾಲ್ಯದಲಿ ಕೆಲವು ದಿನ ಬಿರಿದೆ ಹೋಯಿತು ಹೊತ್ತುಮೇಲೆ ಯೌವನಮದದಿ ಮುಂದರಿಯದೆ ||ಸ್ಥೂಲ ಸಂಸಾರದಲಿ ಸಿಲುಕಿ ಬಳಲಿದೆ ನಾನುಪಾಲಿಸೈ ಪರಮಾತ್ಮ ಭಕುತಿಯನು ಕೊಟ್ಟು 1

ಆಸೆಯೆಂಬುದು ಅಜನ ಲೋಕ ಮುಟ್ಟುತಲಿದೆಬೇಸರದೆ ಸ್ತ್ರೀಯರಲಿ ಬುದ್ದಿಯೆನಗೆ ||ವಾಸುದೇವನೆ ನಿನ್ನ ಪೂಜೆಗೆಯ್ದವನಲ್ಲಕೇಶವನೆ ಕ್ಲೇಶವನು ನಾಶ ಮಾಡಯ್ಯ 2

ಈ ತೆರದಿ ಕಾಲವನು ಕಳೆದೆ ನಾನಿಂದಿರೇಶಭೀತಿ ಮೋಹದಿ ಙ್ಞÕನರಹಿತನಾದೆ ||ಮಾತೆ ಶಿಶುವನು ಕರೆದು ಮನ್ನಿಸುವ ತೆರನಂತೆದಾತಶ್ರೀಪುರಂದರವಿಠಲ ದಯಮಾಡೈ3
********