Showing posts with label ಮೇರೆಯಿಲ್ಲದೆ ಮಾತನಾಡುತಲಿರಲೊಮ್ಮೆ ಕೃಷ್ಣಾ purandara vittala. Show all posts
Showing posts with label ಮೇರೆಯಿಲ್ಲದೆ ಮಾತನಾಡುತಲಿರಲೊಮ್ಮೆ ಕೃಷ್ಣಾ purandara vittala. Show all posts

Friday, 6 December 2019

ಮೇರೆಯಿಲ್ಲದೆ ಮಾತನಾಡುತಲಿರಲೊಮ್ಮೆ ಕೃಷ್ಣಾ purandara vittala

ಪುರಂದರದಾಸರು
ಮೇರೆಯಿಲ್ಲದೆ ಮಾತನಾಡುತಲಿರಲೊಮ್ಮೆ ಕೃಷ್ಣಾ ಎನಬಾರದೆದಾರಿಯ ನಡೆಯುತ ಭಾರವ ಹೊರುವಾಗ ಕೃಷ್ಣಾ ಎನಬಾರದೆ ಪ.

ತಿರುಗಾಡುತ ಮನೆಯೊಳಗಾದರು ಒಮ್ಮೆ - ಕೃಷ್ಣಾಪರಿಪರಿ ಕೆಲಸದೊಳಿದುವೊಂದು ಕೆಲಸವು - ಕೃಷ್ಣಾ 1

ಮಲಗಿಯೆದ್ದು ಮೈಮುರಿದೇಳುತಲೊಮ್ಮೆ - ಕೃಷ್ಣಾಹಲವು ಯೋಚಿಸುತಲಿ ಮಂದಿರದಲಿ ಒಮ್ಮೆ - ಕೃಷ್ಣಾ 2

ಚೆಂದುಳ್ಳ ಹಾಸಿಗೆ ಮೇಲೆ ಕುಳಿತು ಒಮ್ಮೆ ಕೃಷ್ಣಾಕಂದನ ಬಿಗಿದಪ್ಪಿ ಮುದ್ಧಾಡುತಲೊಮ್ಮೆ - ಕೃಷ್ಣಾ 3

ಗಂಧವ ಪೂಸಿ ತಾಂಬೂಲ ಮೆಲ್ಲುತಲೊಮ್ಮೆ - ಕೃಷ್ಣಾಮಂದಗಮನೆಯೊಳು ಸರಸವಾಡುತಲೊಮ್ಮೆ - ಕೃಷ್ಣಾ 4

ಕ್ಷೀರಸಾಗರ ಶಯನ ನೀನೇ ಗತಿಯೆಂದು ಕೃಷ್ಣಾದ್ವಾರಕಾ ಪುರವಾಸಪುರಂದರವಿಠಲ ಕೃಷ್ಣಾ5
********