Showing posts with label ನಂಬಬೇಡ ನಾರಿಯರನು ಹಂಬಲಿಸಿ purandara vittala. Show all posts
Showing posts with label ನಂಬಬೇಡ ನಾರಿಯರನು ಹಂಬಲಿಸಿ purandara vittala. Show all posts

Thursday, 5 December 2019

ನಂಬಬೇಡ ನಾರಿಯರನು ಹಂಬಲಿಸಿ purandara vittala

ಪುರಂದರದಾಸರು
ನಂಬಬೇಡ ನಾರಿಯರನು ಹಂಬಲಿಸಿ ಹಾರಯಿಸಬೇಡ ಅಂಬುಜಾಕ್ಷಿಯರೊಲುಮೆ ಬಯಲುಡಂಬಕವೆಂದು ತಿಳಿಯಿರೊ ಪ.

ನೋಟವೆಲ್ಲ ಪುಸಿಯು - ಸತಿಯರಾಟವೆಲ್ಲ ಸಂಚು - ಸನ್ನೆಕೂಟವೆಲ್ಲ ಗನ್ನ - ಘಾತುಕನೋಟವೆಲ್ಲ ವಂಚನೆವಾತಬದ್ಧ ಹೆಂಗಳಲ್ಲಿಕೋಟಲೆಗೊಂಡು ತಿರುಗಬೇಡಮಾಟಗಾತಿಯರೊಲುಮೆ ಬಯಲುಬೂಟಕವೆಂದು ತಿಳಿಯಿರೊ 1

ಸೋತನೆಂದು ವಿಟಗೆ ದೈನ್ಯಮಾತನಾಡಿ ಮರುಳಗೊಳಸಿಕಾತರವ ಹುಟ್ಟಿಸಿ ಆವನಮಾತೆ - ಪಿತರ ತೊಲಗಿಸಿಪ್ರೀತಿ ಬಡಿಸಿ ಹಣವ ಸೆಳೆದುರೀತಿಗೆಡಿಸಿ ಕಡೆಯಲವನಕೋತಿಯಂತೆ ಮಾಡಿ ಬಿಡುವಚಾತಿಕಾರ್ತಿ ಹೆಂಗಳೆಯರ 2

ಧರೆಯ ಜನರ ಮೋಹಕೆಳಸಿಭರದಿ ನೆಟ್ಟು ಕೆಡಲುಬೇಡಎರೆಳೆಂಗಳ ಹೆಂಗಳೊಲುಮೆಗುರುಳೆ ನೀರ ಮೇಲಿನಮರೆಯಬೇಡ ಗುರುಮಂತ್ರವಸ್ಥಿರವಿಲ್ಲದ ಜನ್ಮದಲ್ಲಿಕರುಣನಿಧಿ ಪುರಂದರವಿಠಲನಚರಣಸ್ಮರಣೆ ಮಾಡಿರೊ3
*******