Showing posts with label ಮರೆಯದೆ ಸಲಹೆನ್ನನು ಯಾದವಗಿರಿದೊರೆ bheemesha krishna MAREYADE SALAHENNANU YAADAVA GIRIDORE. Show all posts
Showing posts with label ಮರೆಯದೆ ಸಲಹೆನ್ನನು ಯಾದವಗಿರಿದೊರೆ bheemesha krishna MAREYADE SALAHENNANU YAADAVA GIRIDORE. Show all posts

Friday, 27 December 2019

ಮರೆಯದೆ ಸಲಹೆನ್ನನು ಯಾದವಗಿರಿದೊರೆ ankita bheemesha krishna MAREYADE SALAHENNANU YAADAVA GIRIDORE



by ಹರಪನಹಳ್ಳಿಭೀಮವ್ವ

ಮರೆಯದೆ ಸಲಹೆನ್ನನು ಯಾದವಗಿರಿ-
ದೊರೆ ಮಂಗರಾಯ ನೀನು
ಸರ್ವಜೀವೋತ್ತಮನೆ ನಿನ್ನನು
ಮರೆಯಹೊಕ್ಕೆನು ಮಾರುತಾತ್ಮಜ
ಕರೆದು ಭಕÀುತರಿಗ್ವರವ ನೀಡುವೊ
ಭಾರತೀಶ ಪ

ಸೀತಾವಲ್ಲಭ ರಾಮರ ಪಾದಾಂಬುಜ
ದೂತನೆಂದೆನಿಸಿದೆಯೊ
ಮಾತೆಗಿಟ್ಟ ಮುದ್ರಿಕೆಯನು
ಘಾತಕ ರಾವಣನ ಪುರಕೆ
ಕಾರ್ತೀಕದುತ್ಸವ ಮಾಡಿ ಮಂಗ-
ಳಾರ್ತಿ ಬೆಳಗಿದೆ ಬಾಲದಿಂದ 1

ಬಕ ಹಿಡಿಂಬಕ ಕೀಚಕ ಕಿಮ್ಮೀರ ಮಾಗಧ
ಮುಖ್ಯ ಪ್ರಮುಖರನು
ಸಕಲ ಅನುಜರ ಸಹಿತ ದುರ್ಯೋಧನನ
ಪ್ರಾಣವ ಸೆಳೆದÀು ಬ್ಯಾಗನೆ
ನಕುಲ ಧರ್ಮಜನಾ ಸಾದೇವ ದ್ರೌಪದಿಗೆ
ಸುಖ ಸಂತೋಷ ನೀಡಿದೆ 2

ಮಧ್ಯಗೇಹರಲ್ಲಿ ಜನಿಸಿ ಸುಜನರಿಗೆ
ಶುದ್ಧಶಾಸ್ತ್ರವ ಬೋಧಿಸಿ
ಗೆದÀ್ದು ಮಾಯಾವಾದಿಗಳ ವಾದಪ್ರ-
ಸಿದ್ಧನೆನಿಸಿದೆ ಮಧ್ವಮುನಿ
ಮುದ್ದು ಭೀಮೇಶಕೃಷ್ಣನ ಪ್ರ-
ಸಿದ್ಧಿ ಮಾಡಿದೆ ಪರಮ ಗುರುವೆ 3
*******