Showing posts with label ಲಾಲಿ ಕಶ್ಯಪಗೋತ್ರ ಪರಮ ಪವಿತ್ರ ಲಾಲಿತ್ರಿ ಗುಣಗಾತ್ರ ಲಕ್ಷ್ಮಿಕಳತ್ರಾ ಲಾಲೀ narasimhavittala. Show all posts
Showing posts with label ಲಾಲಿ ಕಶ್ಯಪಗೋತ್ರ ಪರಮ ಪವಿತ್ರ ಲಾಲಿತ್ರಿ ಗುಣಗಾತ್ರ ಲಕ್ಷ್ಮಿಕಳತ್ರಾ ಲಾಲೀ narasimhavittala. Show all posts

Tuesday, 3 August 2021

ಲಾಲಿ ಕಶ್ಯಪಗೋತ್ರ ಪರಮ ಪವಿತ್ರ ಲಾಲಿತ್ರಿ ಗುಣಗಾತ್ರ ಲಕ್ಷ್ಮಿಕಳತ್ರಾ ಲಾಲೀ ankita narasimhavittala

 ..

'ನರಸಿಂಹವಿಠಲ' ಅಂಕಿತ by ಓರಬಾಯಿ ಲಕ್ಷ್ಮೀದೇವಮ್ಮ ಸೊಂಡೂರು 1865+ 



ಲಾಲಿ ಕಶ್ಯಪಗೋತ್ರ ಪರಮ ಪವಿತ್ರ |

ಲಾಲಿತ್ರಿ ಗುಣಗಾತ್ರ ಲಕ್ಷ್ಮಿಕಳತ್ರಾ ಲಾಲೀ ಪ


ನೀರೊಳಗೆ ಮನೆಯು ಮಾಡಿಓಡ್ಯಾಡೀ |

ಕೋರೆಯನೆ ಮಸೆದು ಭೂಮಿಗೆ ಕಡೆದಾಡೀ

ಮೋರೆಯನು ಮುಚ್ಚಿಕೈಕಾಲು ತೂಗ್ಯಾಡೀ

ಘೋರ ರೂಪವ ಧರಿಸಿ ಬಲಿದಾನವನೆ ಬೇಡೀ 1


ಕೊಡಲಿಯನು ಪಿಡಿದು ಮಾತೆಯ ಶಿರವನೇ ಒಡೆದೂ

ಮಡದಿಗೋಸ್ಕರ ದಶಶಿರನ ಶಿರವತರಿದೂ

ತುಡುಗ ತನದಿ ಮೊಸರು ಗಡಿಗೆಗಳ ಒಡೆದೂ

ಮಡದಿಯರ ವ್ರತಭಂಗ ಮಾಡಿದೆಯೊ ಪಿಡಿದೂ 2


ಹಯವನೇರಿದ ಹರಿಯು ಬಹುಜನರ ಪೊರೆಯೇ

ಚೆಲುವ ಮೂರುತಿ ತೊಟ್ಟಿಲೊಳು ಮುದ್ದು ಸುರಿಯೇ

ಪರಮ ಪುರುಷ ಸದ್ಭಕ್ತರ ಸಿರಿಯೇ

ಪವಡಿಸೋ ನರಸಿಂಹ ವಿಠಲಾ ಧೊರಿಯೇ ಲಾಲೀ 3

****