Showing posts with label ಸಂಗ ವಿಡಿ ವಿಡಿ ಸಾಧು ಸಂಗ ವಿಡಿ ವಿಡಿ mahipati. Show all posts
Showing posts with label ಸಂಗ ವಿಡಿ ವಿಡಿ ಸಾಧು ಸಂಗ ವಿಡಿ ವಿಡಿ mahipati. Show all posts

Wednesday, 1 September 2021

ಸಂಗ ವಿಡಿ ವಿಡಿ ಸಾಧು ಸಂಗ ವಿಡಿ ವಿಡಿ ankita mahipati

 ಸಂಗ ವಿಡಿ ವಿಡಿ ಸಾಧು ಸಂಗ ವಿಡಿ ವಿಡಿ | ಸಂಗ ವಿಡಿಯಂಗದೊಳಗ | ಮಂಗಳುತ್ಸಾಹ ದೋರುವರಾ ಪ 


ಹರಿಪದ ಪರಾಗ ನುಂಡು | ಹರುಷವೇರಿ ಭವಶರಧಿಗೆ | ಹರಿಯ ಭಕುತಿ ಸೇತುಗಟ್ಟಿ | ತೋರಿಸಿ ಜನರ ತಾರಿಸುವರ 1 
ವೇದ ಶಾಸ್ತ್ರಸಾರವಾದ | ಬೋಧ ಸುಧೆಯ ವೆರದು ಮರದು | ಹಾದಿದೋರಿ ಮನಕ ಗತಿಯ | ಸಾಧನವನು ಬೀರುವರ 2 
ಹ್ಯಾವ ಹೆಮ್ಮೆ ಬಿಡಿಸಿ ಸಮ್ಮತಿ | ಭಾವದಿಂದ ಮಹಿಪತಿ ಸ್ವಾಮಿಯಾ | ಸಾವಧಾನದಿಂದಲಿ ಜಗತೀ | ವಲಯದೊಳರಹಿಸುವರು 3
***