ರಾಗ ಪುನ್ನಾಗವರಾಳಿ ಝಂಪೆ ತಾಳ
ಇನ್ನಾದರು ನಿನಗೆ ನೀನು ತಿಳಿಯದೆ ಇಂಥ
ಅನ್ಯಾಯವುಂಟೆ ಪೇಳೊ ಆತ್ಮ ||ಪ||
ಚೆನ್ನಾಗಿ ಕಂಡು ತಿಳಿದು ಚರಿಸುವರೆ ತಿರುಗಿ ತಿರುಗಿ
ಬಿನ್ನಾಣ ಬೇಡ ಕಂಡ್ಯ ಆತ್ಮ ||ಅ||
ಎಷ್ಟು ಜನ್ಮವ ಪಡೆದೆ ಎಷ್ಟು ಬಸಿರಲಿ ಬಂದೆ
ಎಷ್ಟು ತನುವಾಗಿ ಬೆಳೆದೆ ಆತ್ಮ
ಎಷ್ಟು ಮೊಲೆಪಾಲುಂಡೆ ಎಷ್ಟು ದೇಶದಲಿದ್ದೆ
ಎಷ್ಟು ಸತಿಸುತರ ಪಡೆದೆ ಆತ್ಮ |
ಎಷ್ಟು ಶಿಶುವೆಂದೆನಿಸಿಕೊಂಡು ಮೆರೆದೆ
ಎಷ್ಟು ಬನ್ನವ ತಾಳಿದೆ ಆತ್ಮ
ಎಷ್ಟು ಬಂಧುಗಳೊಡನೆ ಎಲ್ಲೆಲ್ಲಿ ಬಂದು ಬೆರೆದೆ
ಎಷ್ಟು ಗುಣದವರ ನೋಡೊ ಆತ್ಮ ||
ಎಲುವುಗಳನು ಕಡೆದು ಎಂಭತ್ತನಾಲ್ಕು ಕೀಲುಗಳು
ಬಲು ನರಂಗಳಲಿ ಬಿಗಿದು ಆತ್ಮ
ನೆಲೆ ರಕ್ತ ಮಾಂಸದಲಿ ನೆರಹಿ ಚರ್ಮವ ತೊಡಿಸಿ
ಬಲು ಬೊಂಬೆಯಾದೆಯಲ್ಲೊ ಆತ್ಮ |
ಮಲಮೂತ್ರ ಪೂಜಿತದ ಮನೆಬಾ-
ಗಿಲೊಂಭತ್ತು ಬಳಿಕ ಕೊಂಡಿಪ್ಪೆಯಲ್ಲೊ ಆತ್ಮ
ಬಲವಂತನೆನಿಸುವರು ಪಂಚಭೂತಗಳಿಂದ
ಬೆಲೆಗೆಯ್ವೆ ದೇಹ ಕಂಡ್ಯಾ ಆತ್ಮ ||
ಮೂವನೆರದ ಭಂಡಿ ಹೊಲನ್ಯಾರದೆಂಬುವುದು
ಮೂರುಗುಣದವರ ನೋಡೊ ಆತ್ಮ
ತಾವರದ ಅಷ್ಟ ಮದ ಜವಿಯಲಿ ಪೋಪುವುದು
ಭಾವದವರ ನೋಡೊ ಆತ್ಮ |
ಭಾವರದ ಷಡ್ವರ್ಗ ಘಾತಕ ಕೊಂಪೆಯಿದು
ತಾವೆನಿಸಿಕೊಂಬುವುದಲ್ಲೋ ಆತ್ಮ
ಭಾವಜನ ಕಲೆ ನೆಲೆಯ ಬಿಟ್ಟರು
ಹದಿನಾರು ಮಂದಿ ನಾರಿಯಾರಿರರು ಕಂಡ್ಯಾ ಆತ್ಮ ||
ಆಡಿ ತಪ್ಪಲು ಬೇಡ , ನೋಡಿ ಕೊಡದಿರಬೇಡ
ಬೇಡಿದರೆ ಕಾಡಬೇಡ ಆತ್ಮ
ಚಾಡಿಚುಡಿತಗಳಾಡಿ ಸಲೆ ಪಂಥಗಳನಾಡಿ
ಕೆಡುಕ ನೀನಾಗಬೇಡ ಆತ್ಮ |
ಆಡಿ ಹಲವರ ಜರೆದು , ಹಗರಣಕೆ ಗುರಿಮಾಡಿ
ಆಡಿ ಹಮ್ಮಿಸಬೇಡ ಆತ್ಮ
ನೆಡಿಗಂಡದಿನನಾಗಿ ನಂಬಿದರೆ ಸಲಹನೇ
ನರಕರುಹನಾಗಬೇಡ ಆತ್ಮ ||
ನೆಚ್ಚದಿರು ಈಯೊಡಲ, ನೆಚ್ಚದಿರು ಈ ದೋರ್ಬಲವ
ನೆಚ್ಚದಿರು ಈ ಸಿರಿಯನು ಆತ್ಮ
ಹೆಚದಿರು ಉಬ್ಬಿನಲಿ ಹೆಚ್ಚದಿರು ಕೊಬ್ಬಿನಲಿ
ಹೆಚ್ಚದಿರು ಕ್ರೂರದಲಿ ಆತ್ಮ |
ಕಚ್ಚದಿರು ಎಲ್ಲರಲಿ , ಕಚ್ಚದಿರು ಬಲ್ಲರಲಿ
ಕಚ್ಚದಿರು ಶ್ವಾನನಂತೆ ಆತ್ಮ
ಬೆಚ್ಚದಿರು ದೃಢದಲ್ಲಿ , ಬೆಚ್ಚದಿಂದ್ರಿಯಗಳಲಿ
ಬೆಚ್ಚದಿರು ಚಿತ್ತದಲ್ಲಿ ಆತ್ಮ ||
ವೇದಶ್ರುತಿಗಳ ಕೇಳು , ಓದು ರಾಮಾಯಣವ
ಭೇದಿಸು ಭಾಷಿತವನು ಆತ್ಮ
ಆದಿಗುರುಹಿರಿಯರಲ್ಲಿ ಅಧಿಕಬುದ್ಧಿಯ ಕೊಡು
ಆಗಮವ ತಿಳಿದು ಬಾಳು ಆತ್ಮ |
ಕದ್ದ ಕಳ್ಳನ ಹಿಡಿವ ಕಪಟ ಕಾಮನ ಗೆಲಿವ
ಕಾಯಕದ ಚಿಂತೆ ಮಾಡು ಆತ್ಮ
ಕಾದ ಹಾಲಿನ ತೆರದಿ ಕಲ್ಮಷವ ಕಳೆದು
ಉಪಕಾರಿ ಜೀವನಾಗೊ ಆತ್ಮ ||
ದೇಶಮೋಹ ಚಿಂತನೆಯ ವಶವೃತ್ತಿಯೊಳಗಾಗಿ
ಅಸುರ ನೀನಾಗಬೇಡ ಆತ್ಮ
ಶಶಿಮುಖಿಯರೆನಿಪ ಪರಸ್ತ್ರೀಯರಲಿ ಕಣ್ಣಿಟ್ಟು
ಪಶುಪಕ್ಷಿ ಆಗಬೇಡ ಆತ್ಮ |
ಪುಸಿಯ ಸಂಸಾರ ಸಂಭೋಗದತಿಶಯದ ಕೊಬ್ಬಿನಲಿ
ನೀ ಸದಾ ದೀನನಾಗಬೇಡ ಆತ್ಮ
ಹಸನಾದ ನರಜನ್ಮ ಹಲವು ಜನ್ಮದಿ ಜನಿಸಿ
ದೆಸೆಗೆಟ್ಟು ತಿರುಗಬೇಡ ಆತ್ಮ ||
ಸತ್ಯವೆಂಬೊ ದೊಡ್ಡ ಸಾಮ್ರಾಜ್ಯಪದವಿಯಲಿ
ನಿತ್ಯ ಓಲಗವ ಮಾಡೊ ಆತ್ಮ
ಅತ್ಯಧಿಕ ಫಲವೀವ ಅನ್ನದಾನಗಳಲ್ಲಿ
ಮೃತ್ಯು ಭಯವೆಲ್ಲ ನೂಕೊ ಆತ್ಮ |
ಮುತ್ತು ಇಲ್ಲದ ರತ್ನ ಮೂರಂತರಂಗದಲಿ
ಮೂವ್ವದೊಡೆಯನ ಪೂಜಿಸೋ ಆತ್ಮ
ಕತ್ತಲೆಯ ಕಳೆಕಳೆದು ಘನಪಾಪಗಳನೆಲ್ಲನೊತ್ತಿ
ನಿಜಬೆಳಕ ನೋಡೊ ಆತ್ಮ ||
ಕುಲಗೋತ್ರವೊಂದಾಗೊ ನೆಲಸೂತ್ರನೊಂದಾಗೊ
ಸಲಹು ಗುಣಸಾಂದ್ರನಾಗೊ ಆತ್ಮ
ಬಲುವೀರ ಶೂರನಾಗೊ ಭಾಗವತ ನೀನಾಗೊ
ಪರಮಪುಣ್ಯಾತ್ಮನಾಗೊ ಆತ್ಮ |
ಚೆಲುವ ಗುರು ಮಧ್ವಪತಿ ಶ್ರೀಲಕ್ಷ್ಮಿಕೃಪೆಯಿಂದ
ಪಾವನದ ಶೀಲನಾಗೊ ಆತ್ಮ
ಇಳೆಯೊಳಗೆ ಪುರಂದರವಿಠಲನಂಘ್ರಿಗಳ ಭಜಿಸಿ
ಎಡೆಬಿಡದೆ ದಾಸನಾಗೊ ಆತ್ಮ ||
***
ಇನ್ನಾದರು ನಿನಗೆ ನೀನು ತಿಳಿಯದೆ ಇಂಥ
ಅನ್ಯಾಯವುಂಟೆ ಪೇಳೊ ಆತ್ಮ ||ಪ||
ಚೆನ್ನಾಗಿ ಕಂಡು ತಿಳಿದು ಚರಿಸುವರೆ ತಿರುಗಿ ತಿರುಗಿ
ಬಿನ್ನಾಣ ಬೇಡ ಕಂಡ್ಯ ಆತ್ಮ ||ಅ||
ಎಷ್ಟು ಜನ್ಮವ ಪಡೆದೆ ಎಷ್ಟು ಬಸಿರಲಿ ಬಂದೆ
ಎಷ್ಟು ತನುವಾಗಿ ಬೆಳೆದೆ ಆತ್ಮ
ಎಷ್ಟು ಮೊಲೆಪಾಲುಂಡೆ ಎಷ್ಟು ದೇಶದಲಿದ್ದೆ
ಎಷ್ಟು ಸತಿಸುತರ ಪಡೆದೆ ಆತ್ಮ |
ಎಷ್ಟು ಶಿಶುವೆಂದೆನಿಸಿಕೊಂಡು ಮೆರೆದೆ
ಎಷ್ಟು ಬನ್ನವ ತಾಳಿದೆ ಆತ್ಮ
ಎಷ್ಟು ಬಂಧುಗಳೊಡನೆ ಎಲ್ಲೆಲ್ಲಿ ಬಂದು ಬೆರೆದೆ
ಎಷ್ಟು ಗುಣದವರ ನೋಡೊ ಆತ್ಮ ||
ಎಲುವುಗಳನು ಕಡೆದು ಎಂಭತ್ತನಾಲ್ಕು ಕೀಲುಗಳು
ಬಲು ನರಂಗಳಲಿ ಬಿಗಿದು ಆತ್ಮ
ನೆಲೆ ರಕ್ತ ಮಾಂಸದಲಿ ನೆರಹಿ ಚರ್ಮವ ತೊಡಿಸಿ
ಬಲು ಬೊಂಬೆಯಾದೆಯಲ್ಲೊ ಆತ್ಮ |
ಮಲಮೂತ್ರ ಪೂಜಿತದ ಮನೆಬಾ-
ಗಿಲೊಂಭತ್ತು ಬಳಿಕ ಕೊಂಡಿಪ್ಪೆಯಲ್ಲೊ ಆತ್ಮ
ಬಲವಂತನೆನಿಸುವರು ಪಂಚಭೂತಗಳಿಂದ
ಬೆಲೆಗೆಯ್ವೆ ದೇಹ ಕಂಡ್ಯಾ ಆತ್ಮ ||
ಮೂವನೆರದ ಭಂಡಿ ಹೊಲನ್ಯಾರದೆಂಬುವುದು
ಮೂರುಗುಣದವರ ನೋಡೊ ಆತ್ಮ
ತಾವರದ ಅಷ್ಟ ಮದ ಜವಿಯಲಿ ಪೋಪುವುದು
ಭಾವದವರ ನೋಡೊ ಆತ್ಮ |
ಭಾವರದ ಷಡ್ವರ್ಗ ಘಾತಕ ಕೊಂಪೆಯಿದು
ತಾವೆನಿಸಿಕೊಂಬುವುದಲ್ಲೋ ಆತ್ಮ
ಭಾವಜನ ಕಲೆ ನೆಲೆಯ ಬಿಟ್ಟರು
ಹದಿನಾರು ಮಂದಿ ನಾರಿಯಾರಿರರು ಕಂಡ್ಯಾ ಆತ್ಮ ||
ಆಡಿ ತಪ್ಪಲು ಬೇಡ , ನೋಡಿ ಕೊಡದಿರಬೇಡ
ಬೇಡಿದರೆ ಕಾಡಬೇಡ ಆತ್ಮ
ಚಾಡಿಚುಡಿತಗಳಾಡಿ ಸಲೆ ಪಂಥಗಳನಾಡಿ
ಕೆಡುಕ ನೀನಾಗಬೇಡ ಆತ್ಮ |
ಆಡಿ ಹಲವರ ಜರೆದು , ಹಗರಣಕೆ ಗುರಿಮಾಡಿ
ಆಡಿ ಹಮ್ಮಿಸಬೇಡ ಆತ್ಮ
ನೆಡಿಗಂಡದಿನನಾಗಿ ನಂಬಿದರೆ ಸಲಹನೇ
ನರಕರುಹನಾಗಬೇಡ ಆತ್ಮ ||
ನೆಚ್ಚದಿರು ಈಯೊಡಲ, ನೆಚ್ಚದಿರು ಈ ದೋರ್ಬಲವ
ನೆಚ್ಚದಿರು ಈ ಸಿರಿಯನು ಆತ್ಮ
ಹೆಚದಿರು ಉಬ್ಬಿನಲಿ ಹೆಚ್ಚದಿರು ಕೊಬ್ಬಿನಲಿ
ಹೆಚ್ಚದಿರು ಕ್ರೂರದಲಿ ಆತ್ಮ |
ಕಚ್ಚದಿರು ಎಲ್ಲರಲಿ , ಕಚ್ಚದಿರು ಬಲ್ಲರಲಿ
ಕಚ್ಚದಿರು ಶ್ವಾನನಂತೆ ಆತ್ಮ
ಬೆಚ್ಚದಿರು ದೃಢದಲ್ಲಿ , ಬೆಚ್ಚದಿಂದ್ರಿಯಗಳಲಿ
ಬೆಚ್ಚದಿರು ಚಿತ್ತದಲ್ಲಿ ಆತ್ಮ ||
ವೇದಶ್ರುತಿಗಳ ಕೇಳು , ಓದು ರಾಮಾಯಣವ
ಭೇದಿಸು ಭಾಷಿತವನು ಆತ್ಮ
ಆದಿಗುರುಹಿರಿಯರಲ್ಲಿ ಅಧಿಕಬುದ್ಧಿಯ ಕೊಡು
ಆಗಮವ ತಿಳಿದು ಬಾಳು ಆತ್ಮ |
ಕದ್ದ ಕಳ್ಳನ ಹಿಡಿವ ಕಪಟ ಕಾಮನ ಗೆಲಿವ
ಕಾಯಕದ ಚಿಂತೆ ಮಾಡು ಆತ್ಮ
ಕಾದ ಹಾಲಿನ ತೆರದಿ ಕಲ್ಮಷವ ಕಳೆದು
ಉಪಕಾರಿ ಜೀವನಾಗೊ ಆತ್ಮ ||
ದೇಶಮೋಹ ಚಿಂತನೆಯ ವಶವೃತ್ತಿಯೊಳಗಾಗಿ
ಅಸುರ ನೀನಾಗಬೇಡ ಆತ್ಮ
ಶಶಿಮುಖಿಯರೆನಿಪ ಪರಸ್ತ್ರೀಯರಲಿ ಕಣ್ಣಿಟ್ಟು
ಪಶುಪಕ್ಷಿ ಆಗಬೇಡ ಆತ್ಮ |
ಪುಸಿಯ ಸಂಸಾರ ಸಂಭೋಗದತಿಶಯದ ಕೊಬ್ಬಿನಲಿ
ನೀ ಸದಾ ದೀನನಾಗಬೇಡ ಆತ್ಮ
ಹಸನಾದ ನರಜನ್ಮ ಹಲವು ಜನ್ಮದಿ ಜನಿಸಿ
ದೆಸೆಗೆಟ್ಟು ತಿರುಗಬೇಡ ಆತ್ಮ ||
ಸತ್ಯವೆಂಬೊ ದೊಡ್ಡ ಸಾಮ್ರಾಜ್ಯಪದವಿಯಲಿ
ನಿತ್ಯ ಓಲಗವ ಮಾಡೊ ಆತ್ಮ
ಅತ್ಯಧಿಕ ಫಲವೀವ ಅನ್ನದಾನಗಳಲ್ಲಿ
ಮೃತ್ಯು ಭಯವೆಲ್ಲ ನೂಕೊ ಆತ್ಮ |
ಮುತ್ತು ಇಲ್ಲದ ರತ್ನ ಮೂರಂತರಂಗದಲಿ
ಮೂವ್ವದೊಡೆಯನ ಪೂಜಿಸೋ ಆತ್ಮ
ಕತ್ತಲೆಯ ಕಳೆಕಳೆದು ಘನಪಾಪಗಳನೆಲ್ಲನೊತ್ತಿ
ನಿಜಬೆಳಕ ನೋಡೊ ಆತ್ಮ ||
ಕುಲಗೋತ್ರವೊಂದಾಗೊ ನೆಲಸೂತ್ರನೊಂದಾಗೊ
ಸಲಹು ಗುಣಸಾಂದ್ರನಾಗೊ ಆತ್ಮ
ಬಲುವೀರ ಶೂರನಾಗೊ ಭಾಗವತ ನೀನಾಗೊ
ಪರಮಪುಣ್ಯಾತ್ಮನಾಗೊ ಆತ್ಮ |
ಚೆಲುವ ಗುರು ಮಧ್ವಪತಿ ಶ್ರೀಲಕ್ಷ್ಮಿಕೃಪೆಯಿಂದ
ಪಾವನದ ಶೀಲನಾಗೊ ಆತ್ಮ
ಇಳೆಯೊಳಗೆ ಪುರಂದರವಿಠಲನಂಘ್ರಿಗಳ ಭಜಿಸಿ
ಎಡೆಬಿಡದೆ ದಾಸನಾಗೊ ಆತ್ಮ ||
***
pallavi
innAdaru ninage nInu tiLiyade intha anyAyavuNTe pELo Atma
anupallavi
cennAgi kaNDu tiLidu carisuvare tirugi tirugi binnANa bEDa kaNDya Atma
caraNam 1
eSTu janmava paDede eSTu basirali bande eSTu tamanAgi beLede Atma
eSTu mole pAluNDe esTu dEshadalidde eSTu sati sutara paDede Atma
eSTu shashivendenisi koNDu merede eSTu bannava tALide Atma
eSTu bandhugaLodane ellelli bandu brerede eSTu guNadavara nODo Atma
caraNam 2
eluvugaLanu kaDedu embhatta nAlku kIlugaLu balu narangaLali bigidu Atma
nele rakta mAmsadali nerahi carmava toDisi balu bombeyAdeyallo Atma
mala mUtra pUjitada mane bAgilombhattu baLiga koNDippeyallo Atma
balavantanenisuvaru panca bhUtagaLinda bele geive dEha kaNDyA Atma
caraNam 3
mUvanereda bhaNDi holanyAradembuvudu mUru guNadavara nODo Atma
tAvarada aSTamada javiyali pOpuvudu bhAvadavara nODo Atma
bhAvarada SaDvarga ghAtaka kombeyidu tAvenisi kombudallo Atma
bhAvajana kale neleya biTTaru hadinAru mandi pAri yAriraru kaNDyA Atma
caraNam 4
Adi tappalu bEDa nODi koDadira bEDa bEDidare kADa bEDa Atma
cADi cuDitagaLAgi sale bandhagaLanADi keDuka nInAga bEDa Atma
Adi halavara jaridu hagaraNake guri mADi Adi hammira bEDa Atma
neDi keNDadinanAgi nambidare salahane narakaruhanAga bEDa Atma
caraNam 5
neccadiru IyoDala neccadiru I dOrbalava neccadiru I siriyanu Atma
heccadiru ubbinali heccadiru kobbinali heccadiru krUradali Atma
kaccadiru ellarili kaccadiru ballarali kaccadiru svAnanante Atma
beccadiru drDhadalli beccadiru indriyagaLali beccadiru cittadalli Atma
caraNam 6
vEda shrutigLa kELu Odu rmAyaNava bhEdisu bhASitavanu Atma
Adi guru hiriyalli adhika buddhiya koDu Agamava tiLidu bALu Atma
kadda kaLLana hiDiva kapaTa kAmana geliva gAyakada cinte mADu Atma
kAda hAlina teradi kalmaSava kaLedu upakAri jIvanAgO Atma
caraNam 7
dEsha mOha cintaneya vasha vrttiyoLagAgi asura nInAga bEDa Atma
shashimukhiyarenipa para strIyali kaNNiTTu pashupakSi Aga bEDa Atma
pusiya samsAra sambhOgadatishayada kobbinalli nI sadAdInanAga bEDa Atma
hasanAda nara janma halavu janmadi janisi dese geTTu tiruga bEDa Atma
caraNam 8
satyavembudu doDDa sAmrAjya padaviyali nitya olagava mADo Atma
atyadhika balavIva anna dAnagaLalli mrtyu bhayavella nUko Atma
muttu illada ratna mUrantarangadali mUvvadoDeyana pUjisO Atma
kattaleya kaLe kaLedu ghana pApagaLanellanotti nija beLaga nODO Atma
caraNam 9
kula gOtravondAgO nelasutranondAgO salahu guNa sAndrango Atma
balavIra sUranAgo bhAgavata nInAgo parama puNyAtmanAgo Atma
celuva guru madhvapati shrI lakSmI krpeyinda pAvanada shIlanAgo Atma
iLeyoLage purandara viTTalananghrigaLa bhajisu eDebiDade dAsanAgo Atma
***