..
kruti by shreesha keshava vittala dasaru (subbanna dasa)
ಧನ್ಯನಾದೆನಾ ಗುರು ಪ
ಸನ್ನುತಾಂಗ ಗುರುರಾಜರ ನೋಡಿ ಅ.ಪ
ಘನ್ನ ಮಹಿಮರಿವರು | ವರ ಪಾವನ್ನಚರಿತರಿವರು |
ಮುನ್ನ ಮಾಡಿದಪರಾಧಗಳೆಣಿಸದೆ| ಉನ್ನತ
ಸುಖಗಳನೀವರ ನೋಡಿ 1
ಬುಧರ ಮಹಾತ್ಪ್ರಭುವೋ| ಭಜಿಪರ ಮಧುರ ಸುರದ್ರುಮವೋ|
ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು|
ಅಧಮರ ಮುರಿದಿಹ ಧೀರರ ನೋಡಿ2
ಶ್ರೀಶ ಕೇಶವನ್ನ | ಮನದೊಳುಪಾಸನೆಗೈವರನು |
ಭಾಸುರಾಂಗ ಯತಿರಾಘವೇಂದ್ರರನು| ಈ ಸಮಯದಿ
ಕೊಂಡಾಡುತೆ ನೋಡಿ3
***
ಧನ್ಯನಾದೆನಾ ಗುರು || PA ||
ಸನ್ನುತಾಂಗ ಗುರುರಾಜರ ನೋಡಿ || A PA ||
ಘನ್ನ ಮಹಿಮರಿವರು | ವರ ಪಾವನ್ನಚರಿತರಿವರು |
ಮುನ್ನ ಮಾಡಿದಪರಾಧಗಳೆಣಿಸದೆ |
ಉನ್ನತ ಸುಖಗಳನೀವರ ನೋಡಿ || 1 ||
ಬುಧರ ಮಹಾತ್ಪ್ರಭುವೋ | ಭಜಿಪರ ಮಧುರ ಸುರದ್ರುಮವೋ |
ಸುಧೆಗೆ ಪರಿಮಳವ ರಚಿಸಿದ ವಸುಧೆಯೊಳು |
ಅಧಮರ ಮುರಿದಿಹ ಧೀರರ ನೋಡಿ || 2 ||
ಶ್ರೀಶ ಕೇಶವನ್ನ | ಮನದೊಳುಪಾಸನೆಗೈವರನು |
ಭಾಸುರಾಂಗ ಯತಿರಾಘವೇಂದ್ರರನು |
ಈ ಸಮಯದಿ ಕೊಂಡಾಡುತೆ ನೋಡಿ || 3 ||
***
Dhan’yanādenā guru || PA ||
sannutāṅga gururājara nōḍi || A PA ||
ghanna mahimarivaru | vara pāvannacaritarivaru |
munna māḍidaparādhagaḷeṇisade | unnata sukhagaḷanīvara nōḍi || 1 ||
budhara mahātprabhuvō | bhajipara madhura suradrumavō |
sudhege parimaḷava racisida vasudheyoḷu | adhamara muridiha dhīrara nōḍi || 2 ||
śrīśa kēśavanna | manadoḷupāsanegaivaranu |
bhāsurāṅga yatirāghavēndraranu | ī samayadi koṇḍāḍute nōḍi || 3 ||
Plain English
Dhan’yanadena guru || PA ||
sannutanga gururajara nodi || A PA ||
ghanna mahimarivaru | vara pavannacaritarivaru |
munna madidaparadhagalenisade | unnata sukhagalanivara nodi || 1 ||
budhara mahatprabhuvo | bhajipara madhura suradrumavo |
sudhege parimalava racisida vasudheyolu | adhamara muridiha dhirara nodi || 2 ||
srisa kesavanna | manadolupasanegaivaranu |
bhasuranga yatiraghavendraranu | i samayadi kondadute nodi || 3 ||
***