Showing posts with label ವಾದಿರಾಜ ಗುರು ನೀ ದಯಮಾಡದೆ jagannatha vittala VADIRAJA GURU NEE DAYAMADADE VADRAJA STUTIH. Show all posts
Showing posts with label ವಾದಿರಾಜ ಗುರು ನೀ ದಯಮಾಡದೆ jagannatha vittala VADIRAJA GURU NEE DAYAMADADE VADRAJA STUTIH. Show all posts

Tuesday, 31 December 2019

ವಾದಿರಾಜ ಗುರು ನೀ ದಯಮಾಡದೆ ankita jagannatha vittala VADIRAJA GURU NEE DAYAMADADE VADRAJA STUTIH




ರಾಗ-ಧನಶ್ರೀ (ಜೀವನಪುರಿ) ಆದಿತಾಳ(ತೀನ್ ತಾಲ್)
2nd Audio by Mrs. Nandini Sripad



ವಾದಿರಾಜಗುರು ನೀ ದಯಮಾಡದೆ ||ಪ||
ಈ ದುರಿತವ ಕಳೆಯದಿರ್ಪರ್ಯಾರೊ ||ಅ.ಪ||

ಕಲಿಯ ಬಾಧೆಯು ತಾ ವೆಗ್ಗಳವಾಗಿದೆ
ಇಳೆಯೊಳು ಯತಿಕುಲತಿಲಕ ಕೃಪಾಳೊ ||೧||

ದೇಶಿಕಾರ್ಯ ವಾಗೀಶ ಕುವರ ತವ
ದಾಸ ಸಮೂಹವ ನೀ ಸಲಹೈ ಸದಾ ||೨||

ಜನ್ಮಾದಿವ್ಯಾದ್ಯುನ್ಮಾದ ಭ್ರಮ
ನಿಮ್ಮೊರೆ ಹೊಕ್ಕರಿಗಿನ್ಮೊದಲುಂಟೆ ||೩||

ನೀ ಗತಿಯೆಂದನುರಾಗದಿ ನಂಬಿದ
ಭೋಗಿಪುರೀಶನ ರೋಗವ ಕಳೆದೆ ||೪||

ಯಲರುಣಿ ಭಯಕಂಜಿ ನಿಮ್ಮಾಸನ
ಕೆಳಗಿರೆ ಕಂಡದನುಳುಹಿದೆ ಕರುಣಿ ||೫||

ಗರಮಿಶ್ರಿತ ನರಹರಿ ನೈವೇದ್ಯವ
ಅರಿತು ಉಂಡು ಅದನರಗಿಸಿಕೊಂಡೆ ||೬||

ಹಯವದನನ ಪದದ್ವಯ ಭಜಕಾಗ್ರಣಿ
ದಯದಿ ವಿಪ್ರನಿಗೆ ನಯನವನಿತ್ತೆ ||೭||

ಮೋದ ಮುನಿಮತ ಮಹೋದಧಿ ಪೂರ್ಣ
ವಿಧೋದಯ ಶರಣರ ಕಾದುಕೊ ದೊರೆಯೆ ||೮||

ಅರ್ಥಿಗಳಿಗೆ ಪರಮಾರ್ಥವ ತೋರಿಸಿ
ತೀರ್ಥ ಪ್ರಬಂಧವ ಕೀರ್ತನೆಗೈದೆ ||೯||

ಯಮಿವರನೆ ತ್ರಿವಿಕ್ರಮ ರಥೋತ್ಸವ
ಸಮಯವಿದೆಂದುತ್ಕ್ರಮಣವ ತೊರೆದೆ ||೧೦||

ಬಂದು ಕರೆಯೆ ಪುರಂದರನಾಳ್ಗಳು
ಹಿಂದಟ್ಟಿದೆ ಕರ್ಮೇಂದ್ರಿಯಗಳರಸನೆ ||೧೧||

ಭೂಮಿಪರುಪಟಳಕಾಮಹಿನಾಥನು
ತಾ ಮೈಮರೆದಿರೆ ನೀ ಮುದವಿತ್ತೆ ||೧೨||

ನಿನ್ನೊಶನಾದ ಜಗನ್ನಾಥವಿಠಲನ
ಇನ್ನಾದರು ತೋರೆನ್ನ ಮನದಲಿ ||೧೩||
***

Vaadiraaja guru nee daya maadade |
Ee duritagala nivaariparaaro || pa ||

Deshikaarya vaageesha kuvara tava |
Daasa samoohava nee salaho sadaa || 1 ||

Nee gati endanuraagadi nambida |
Bhoga pureeshana rogava kalede || 2 ||

Janmaadhi vyaadhi unmaada vibhramegalu |
Nimmore hokka melinniralunte || 3 ||

Moda munimata mahodadhi chandra|
Poornodaya sharanara kaaduko doreye ||4||

Kali bhaadeyu veggala vaayitu endu |
Ilegilid|yatikula tilaka krupaalu || 5 ||

Ninvashanaada jagannaathaviththalana |
Innaadaru torenna manadali || 6 ||
***

pallavi

vAdirAjaguru nI dayamADade

anupallavi

I duritava kaLeyadIrparArO

caraNam 1

kaliya bAdheyu tA veggaLavAgide iLeyoLu yatikula tilaka krpALO

caraNam 2

dEshi kArya vAgIsha kuvara tava dAsa samUhavanI salahai sadA

caraNam 3

janmAdi vyAdyunmAda bhrama nimmore hokarigin modaluNTE

caraNam 4

nI gatiyendanu rAgadi nambida bhOgi purIshana rOgava kaLede

caraNam 5

elaruNi bhayakanji nimmAsana keLagide kaNDadanuLuhide karuNi

caraNam 6

garamishrita narahari naivEdyava aritu uNDu adanaragisi koNDa

caraNam 7

hayavadanana padadvaya bhajakAgraNi dayadi vipranige nayanavitte

caraNam 8

mOda munimata mahO dadhi pUrNa vidhOdaya sharaNara kAdukO dhoreyE

caraNam 9

arthigaLige paramArthava tOrisi tIrha prabandhava kIrtanegaidE

caraNam 10

yamivarene trivikrama rathOtsava samayavidendu kraMaNava torede

caraNam 11

bandu kareye puranhada nALgaLu hindaTTide karmEndiyagaLa rasanE
1
caraNam 2

bhUmi parupaTala kAmahinAthanu tA maimaredire nImudavittE
1
caraNam 3

ninnoshanAda jagannAtha viThalana innAdaru tOrenna mAnadali
***

 ರಾಗ ಪೂರ್ವಿಕಲ್ಯಾಣಿ         ಏಕತಾಳ 

ವಾದಿರಾಜ ॥ ಪ ॥

ವಾದಿರಾಜ ಗುರು ನೀ ದಯಮಾಡದೊ - ।
ಡೀದುರಿತಗಳ ನಿವಾರಿಪರಾರೊ ॥ ಅ ಪ ॥

ಕಲಿಬಾಧೆಯು ವೆಗ್ಗಳವಾಗಿದೆಯೆಂ - ।
ದಿಳೆಯೊಳಿಳಿದ ಯತಿತಿಲಕ ಕೃಪಾಳೋ ॥ 1 ॥

ದೇಶಿಕಾರ್ಯವಾಗೀಶಕುವರ ತವ ।
ದಾಸಸಮೂಹವ ನೀ ಸಲಹೊ ಸದಾ ॥ 2 ॥

ಜನ್ಮಾಧಿವ್ಯಾಧ್ಯುನ್ಮಾದಭ್ರಮ
ನಿಮ್ಮೊರೆ ಹೊಕ್ಕರಿಗಿನ್ಮೊದಲುಂಟೆ ॥ 3 ॥

ನೀ ಗತಿಯೆಂದನುರಾಗದಿ ನಂಬಿದೆ ।
ಭೋಗಿಪುರೀಶನ ರೋಗವ ಕಳೆದೆ ॥ 4 ॥

ಯಲರುಣಿಭಯಕಂಜಿಲಿ ನಿಮ್ಮಾಸನ ।
ಕೆಳಗಿರೆ ಕಂಡದನುಳಿಹಿದ ಕರುಣಿ ॥ 5 ॥

ಗರಮಿಶ್ರಿತನರಹರಿನೈವೇದ್ಯವ ।
ಅರಿತು ಉಂಡೂ ಅದನರಗಿಸಿಕೊಂಡೆ ॥ 6 ॥

ಹಯವದನನ ಪದದ್ವಯಭಜಕಾಗ್ರಣಿ ।
ದಯದಿ ವಿಪ್ರನಿಗೆ ನಯನವನಿತ್ತೆ ॥ 7 ॥

ಮೋದಮುನಿಮತಮಹೋದಧಿಪೂರ್ಣ -
ವಿಧೋದಯ ಶರಣರ ಕಾದುಕೊ ಧೊರೆಯೆ ॥ 8 ॥ 

ಆರ್ಥಿಗಳಿಗೆ ಪರಮಾರ್ಥವ ತೋರಿಸಿ ।
ತೀರ್ಥಪ್ರಬಂಧವ ಕೀರ್ತನೆಗೈದೆ ॥ 9 ॥

ಯಮಿವರನೆ ತ್ರಿವಿಕ್ರಮನ ರಥೋತ್ಸವ - ।
ಸಮಯವಿದೆಂದುತ್ಕ್ರಮಣವ ತೊರೆದೆ ॥ 10 ॥

ಬಂದು ಕರೆಯೆ ಪುರಂದರನಾಳ್ಗಳು ।
ಹಿಂದಟ್ಟಿದ ಕರ್ಮಂದಿಗಳರಸ ॥ 11 ॥

ಭೂಮಿಪರುಪಟಳಕಾಮಹಿನಾಥನು ।
ತಾ ಮೈಮರೆದಿರೆ ನೀ ಮುದವಿತ್ತೆ ॥ 12 ॥

ನಿನ್ನೊಶನಾದ ಜಗನ್ನಾಥವಿಠಲನ ।
ಉನ್ನಾಹಲಿ ತೋರೆನ್ನ ಮನದಲಿ ॥ 13 ॥
************

ವಾದಿರಾಜ ಗುರು ನೀ ದಯಮಾಡದೆ
ಈ ದುರಿತಗಳ ಕಳೆದಾದರಿಪರಾರೊ ||pa||

ದೈಶಿಕಾರ್ಯ ವಾಗೀಶಕುವರ ತವ
ದಾಸಸಮೂಹವ ನೀ ಸಲಹೋ ಸದಾ||1||

ನೀ ಗತಿಯೆಂದನುರಾಗದಿ ನಂಬಿದೆ
ಭೋಗಪತೀಶನ ರೋಗವ ಕಳೆದೆ ||2||

ಜನ್ಮಾಧಿವಾಧ್ಯುನ್ಮಾದ ಭ್ರಮ
ನಿಮ್ಮ ಮೊರೆ ಹೊಕ್ಕ ಮೇಲಿನ್ನರಲುಂಟೆ ||3||

ಭೂಮಿಪರುಪಟಳಕಾ ಮಹಿನಾಥನು
ತಾ ಮೈಮರೆದಿರೆ ನೀ ಮುದವಿತ್ತೆ||4||

ಮೋದಮುನಿಮತ ಪಯೋದಧಿ ಪೂರ್ಣ
ವಿಧೋದಯ ಶರಣರ ಕಾದುಕೊ ಧೊರಿಯೆ||5||

ಕಲಿಬಾಧೆಯು ವೆಗ್ಗಳವಾಗಿದೆ ಕಾಯೊ
ಇಳೆಯೊಳು ಯತಿಕುಲತಿಲಕ ಕೃಪಾಳೊ ||6||

ನಿನ್ನೊಶನಾದ ಜಗನ್ನಾಥ ವಿಠಲನ
ಉನ್ನಾಹದಲಿ ತೋರೆನ್ನ ಮನದಲಿ ||7||
******