Showing posts with label ಕಾಲವು ಮೀರಿತು ಕಾಯದಿಹುದು ಥರವೇ ಮಂತ್ರಾಲಯ ಪ್ರಭುವೇ tandevenkatesha vittala. Show all posts
Showing posts with label ಕಾಲವು ಮೀರಿತು ಕಾಯದಿಹುದು ಥರವೇ ಮಂತ್ರಾಲಯ ಪ್ರಭುವೇ tandevenkatesha vittala. Show all posts

Monday 6 September 2021

ಕಾಲವು ಮೀರಿತು ಕಾಯದಿಹುದು ಥರವೇ ಮಂತ್ರಾಲಯ ಪ್ರಭುವೇ ankita tandevenkatesha vittala

 ankita ತಂದೆವೆಂಕಟೇಶವಿಠಲ

ರಾಗ: ಕಮಾಚ್ ತಾಳ: ಆದಿ


ಕಾಲವು ಮೀರಿತು ಕಾಯದಿಹುದು ಥರವೇ ಮಂತ್ರಾಲಯ ಪ್ರಭುವೇ


ಕಾಲಬಲದಿ ವಸುಧಾಲತಾಂಗಿಯರ 

ಲೋಲುಪತೆಗೆ ಮನ ಮೇಳವಿಸಿತು ಹಾ ಅ.ಪ


ಭೂರಿಯಹಮ್ಮಮಕಾರದಿ ಧರ್ಮವಿಚಾರಗೈಯ್ಯದಪಚಾರಿಸುತಾ

ವೀರವೈಷ್ಣವರಸಾರಿ ವಾಯುಮತಸಾರವರಿಯದೆ ವಿಹಾರಿಸುತ

ಘೋರೈಸುವ ಸಂಸಾರಕಾಂತಾರದಿ ತಾರಿದೆ ದೀನೋದ್ಧಾರಿ ವಿಚಾರಿಸೋ 1

ಭೂಪತಿಜಾತಟಸ್ಥಾಪಿತ ಸದ್ಮ ಶ್ರೀಪ್ರಹ್ಲಾದ ಪ್ರತೀಪಜನೇ

ಶ್ರೀಪಾದಗುರುಪ್ರಾಪುತ ಜ್ಞಾನ ಸುಧಾಪರಮತಿಕೃತ ದೀಪಿಕನೇ

ತಾಪತ್ರಯದಹಿತಾಪತ್ಯನು ನಾ ನೀ ಪತಿಕರಿಸದೆ ಕಾಪಥಕಳೆವರೆ 2

ಶಿಷ್ಟಯಮಿಕುಲೋತ್ಕøಷ್ಟ ಹೃನ್ಮಧ್ಯನಿವಿಷ್ಟ ತಂದೆಶ್ರೀವೆಂಕಟೇಶಾ

ವಿಠಲ ಸೇವಾನಿಷ್ಠ ಆನತಪ್ರದೇಷ್ಟ ಕೃಷ್ಣ ರಾಘವ ವ್ಯಾಸ

ಹೃಷ್ಟಚರಣಸುಮ ಷಟ್ಪದ ಕರ್ಮಭ್ರಷ್ಟನ ಪೊರೆ ಸ್ಮಿತದೃಷ್ಟಿಯ ಬೀರಿ 3

***

ಅಪಚಾರಿಸುತ=ಹೀಯಾಳಿಸುತ; 

ಸಂಸಾರ ಕಾಂತಾರದಿ ತಾರಿದೆ=ಸಂಸಾರವೆಂಬ 

ಅಡವಿಯಲ್ಲಿ ಸೊರಗಿದೆ; ಪತಿಕರಿಸದೆ=ದಯತೋರದೆ; 

ಕಾಪಥ=ಕೆಟ್ಟ ದಾರಿ; 

ಶಿಷ್ಠಯಮಿ=ಶಿಷ್ಠ ಯತಿ; 

ನಿವಿಷ್ಠ=ಸೇರಿದ; 

ಪ್ರದೇಷ್ಟ=ಇಷ್ಟಪ್ರದ; ಹೃಷ್ಟ=ಆನಂದದಾಯಕ; 

ಸ್ಮಿತ ದೃಷ್ಟಿ=ಮುಗುಳು ನಗೆಯಿಂದ ಕೂಡಿದ ದೃಷ್ಟಿ;