Showing posts with label ಓಂ ನಮೋ ರಾಘವೇಂದ್ರಾ ಘನದಯ ದಾಸಾಂದ್ರಾ gurumahipati OM NAMO RAGHAVENDRA GHANA DAYA DAASANDRA. Show all posts
Showing posts with label ಓಂ ನಮೋ ರಾಘವೇಂದ್ರಾ ಘನದಯ ದಾಸಾಂದ್ರಾ gurumahipati OM NAMO RAGHAVENDRA GHANA DAYA DAASANDRA. Show all posts

Thursday, 2 December 2021

ಓಂ ನಮೋ ರಾಘವೇಂದ್ರಾ ಘನದಯ ದಾಸಾಂದ್ರಾ ankita gurumahipati OM NAMO RAGHAVENDRA GHANA DAYA DAASANDRA

ಕಾಖಂಡಕಿ ಶ್ರೀ ಕೃಷ್ಣದಾಸರು

ಓಂ ನಮೋ ರಾ‌ಘವೇಂದ್ರಾ ಪ 

ಓಂ ನಮೋ ರಾಘವೇಂದ್ರಾ ಘನದಯ ದಾಸಾಂದ್ರಾ ವಾರಿಧಿ ಪೂರ್ಣಚಂದ್ರಾ1

ಶ್ರೀರಾಮ ಜಯರಾಮ ಸ್ವಾಮಿ ಜಯಜಯ ರಾಮಾ ಈರೀತಿ ಸ್ಮøತಿಸಲಿಕೆ ಕೊಡುವಿ ವೈಕುಂಠ ಧಾಮಾ2 

ಉಗ್ರ ವೃತ ತಪದಿಂದಾ ಜಪ ಅನುಷ್ಠಾನದಿಂದಾ ಶ್ರೀಘ್ರದಿಂದ ಪಡಕೊಂಬಾ ಫಲಕಾಮ ಸನ್ನಿಧಾ3 

ಹನುಮಬಲ್ಲಾ ಹರಬಲ್ಲಾ ಋಷಿನಾರದ ಬಲ್ಲಾ ನೆನವನಾಮ ಸವಿಯಲೋ ಹೇಳಲಿಕೆ ಅಳವಲ್ಲಾ 4 

ಮರಳು ಮಾನವರಂತಾ ಎನ್ನ ನೋಡಬ್ಯಾಡ ಡೊಂಕಾ ಗುರುಮಹಿಪತಿ ಸ್ವಾಮಿ ನಾಮ ವೆನೆವ ನಿ:ಶಂಕಾ 5

***