..
kruti by radhabai
ಬಾರೈಯ್ಯಾ ಶ್ರೀ ರಾಘವೇಂದ್ರಾ ಭಕ್ತಾರನಿಧಿಯೆ
ಕಾರುಣ್ಯ ಮೂರ್ತಿ ನೀ ಕರುಣಿಸೊ ಪ್ರಭುವೇ ಪ
ಎಲ್ಲೆಲ್ಲಿ ನೋಡಲಲ್ಲಿಲ್ಲಿ ನಿಮ್ಮಯ ಕೀರ್ತಿಯನು
ಮೊರೆಹೊಕ್ಕ ಸುಜನರ ಪೊರೆವರೆಂಬ ಬಿರುದು ಕೇಳಿ
ತ್ವರಿತದಿಂದಲಿ ಬಂದೆನೋ ಭರದೀ ಹಾರೈಸು ಕರುಣಾ ಶರಧೀ 1
ನಿಷ್ಠೆಯಿಂದಲಿ ಮನ ಮುಟ್ಟಿ ಭಜಿಸುವರ
ಇಷ್ಟಾರ್ಥಗಳನಿತ್ತು ಸಲಹಿದೆ ತುಪ್ಪರಾಗುತಲವರ
ಕಷ್ಟಗಳನೇ ಕಳೆದೆ ಉದ್ಧರಿಸಿದೆ ಅಷ್ಟ ಸೌಭಾಗ್ಯವ
ಕೊಟ್ಟು ರಕ್ಷಿಸಿದೇ - ಕೈಬಿಡದೇ 2
ಅಡಿಗಳಿಗೆರಗುತಲಿ ನುಡಿ ನುಡಿಗೆ ತುತಿಸಲಿ
ಬಿಡದೆ ನಿನ್ನನು ಕೊಂಡಾಡುತಲಿ ತಡಮಾಡದೆ
ಯಡರುಗಳ ಪರಿಹರಿಸಿದೆ ನಿಮ್ಮ ಮಹಿಮೆಗೆ
ಸರಿಗಾಣೆ ಭೂಮಂಡಲದೊಳಗೇ ಪ್ರಭವೇ 3
***