Showing posts with label ನೋಡಿರೋ ನಿಜ ನೋಡಿರೋ ನೋಡಲು ಗುರುಸೇವೆ ಮಾಡಿರೋ mahipati. Show all posts
Showing posts with label ನೋಡಿರೋ ನಿಜ ನೋಡಿರೋ ನೋಡಲು ಗುರುಸೇವೆ ಮಾಡಿರೋ mahipati. Show all posts

Wednesday, 1 September 2021

ನೋಡಿರೋ ನಿಜ ನೋಡಿರೋ ನೋಡಲು ಗುರುಸೇವೆ ಮಾಡಿರೋ ankita mahipati

ನೋಡಿರೋ ನಿಜ ನೋಡಿರೋ ನೋಡಲು ಗುರುಸೇವೆ ಮಾಡಿರೋ ಪ  


ನೋಡದರೊಳಗೊಂದಡಗ್ಯಾದೆ ಅಡಗಿದಕೊಂದು ಮನೆ ಮಾಡ್ಯಾದೆ ಮಾಡಿದರೊಳಗೊಂದು ಮೂಡ್ಯಾದೆ ಮೂಡಿದಕೊಂದು ಗೂಢವಾಗ್ಯಾದೆ 1 

ಆಡುವೆರಡು ಮಧ್ಯಾನಾಡ್ಯಾದೆ ನಾಡಿ ಮಧ್ಯೊಂದು ಕೂಡಿಹದ್ಯಾದೆ ಕೂಡಿದ ಹಾದಿಗೊಂದು ಮಾಡ್ಯಾದೆ ಮಾಡಿದಕೊಂದು ಕೈ ಗೂಡ್ಯಾದೆ 2 

ಮುಂದ ನೋಡಲು ಹಿಂದವಾಗ್ಯಾದೆ ಹಿಂದನೋಡಲು ಮಂದವಾಗ್ಯಾದೆ ಹಿಂದ ಮುಂದ ತಾನೆ ತುಂಬ್ಯಾದೆ ಕಂದ ಮಹಿಪತಿಗಾನಂದಾಗ್ಯಾದೆ 3

****