by ಶ್ರೀ ಭೂಪತಿ ವಿಟಲ ದಾಸರು
ಸತ್ಯಧ್ಯಾನರ ಪಾದ ಸ್ಮರಿಸುವ ಮನುಜಗೆ
ಸತ್ಯವಾದ ಜ್ಞಾನ ಹುಟ್ಟುವುದು | ಪ |
ಶಕ್ತಿ ಭಕ್ತಿ ಯುಕ್ತಿ ಸೌಭಾಗ್ಯ ಸಂಪತ್ತು
ಧೈರ್ಯ ಔದಾರ್ಯ ಉತ್ಸಾಹ ಮೂರುತಿಯಾದ | ಅ.ಪ |
ಹರಿಯೆ ಸರ್ವೋತ್ತಮ ಸರ್ವಗುಣ ಪರಿಪೂರ್ಣ
ಸರ್ವದೋಷ ವರ್ಜಿತನೆಂದು
ವರ ಮಧ್ವಮತವೆ ವೇದ್ಯವೆಂದು
ಧರೆಯೊಳು ಜಯಭೇರಿ ಹೊಡಿಸಿದ ಧೀರಾ | ೧ |
ಪರವಾದಿ ವಾಕ್ಯಾರ್ಥ ಪರರ ಕೊರಳಿಗೆ ಕಟ್ಟಿ
ದುರ್ವಾದಿಗಳ ಸದ್ದು ಆದಗಿಸುತಾ
ಸರ್ವ ಸಾಮಾನ್ಯರಿಗೆ ಸುಲಭ ತಿಳಿಯುವಂತ
ಪ್ರಶ್ನಾರ್ಹ ರೂಪಗಳ ಗ್ರಂಥ ರಹಿಸಿದಂಥಾ | ೨ |
ದಾನದಲಿ ಕರ್ಣ ಜ್ಞಾನದಿ ಶುಕಮುನಿ
ಮೌನಿ ಕುಲಕೆ ಸನ್ಮಾನ್ಯರಾಗಿ
ಧರ್ಮ ಸಾಮ್ರಾಜ್ಯಕೆ ಸಾರ್ವಭೌಮನಾದ
ಶ್ರೀನಿಧಿ ಭೂಪತಿವಿಠಲನ ದಾಸ |
***