kruti by bhupati vittalaru ( kakhandaki Ramacharyaru)
ರಥವವೇರಿದ ಚಂದ್ರಾ ರಾಘವೇಂದ್ರನೋಡು ಪಾಡು
ಕುಣಿದಾಡಿ ಭಜನೆಮಾಡುಬೇಡಿದ ವರವ ಕೊಡುವಾ ಪ
ಖಂಬದಿ ನರಹರಿ ಬರಿಸಿದ ಕಂಡಾಕುಂಭಿಣಿಪತಿ
ಕುಹಯೋಗವ ಕಳೆದಾನಂಬಿದವರ ಪೊರೆವಾ 1
ಆದ್ಯ ಸತ್ಯಾಗ್ರ' ಭಕ್ತ ಶಿರೋಮಣಿಉದ್ಗ್ರಂಥಗಳನು
ರಚಿಸಿದ ದಿನಮಣಿಮಧ್ವಮತೋದ್ಧಾರಾ 2
ಭೂಪತಿ - ವಿಠ್ಠಲಗೆ ಪ್ರೀತಿ ವಿಖ್ಯಾತಾಆಪದ್ಬಾಂಧವ
ಅನಾಥನಾಥಾರಥೋತ್ಸವದಿ ಮೆರೆವಾ 3
***
ರಥವ ನೇರಿದ ಚಂದ್ರಾ ಶ್ರೀ ರಾಘವೇಂದ್ರಾ
ಆಡಿ ಪಾಡಿ ಕುಣಿದಾಡಿ ಭಜನೆಮಾಡು |
ಬೇಡಿದ ವರ ಕೊಡುವಾ ಬೇಡಿದ ವರ ಕೊಡುವಾ| ಅ.ಪ.|
ಕಂಬದಿ ನರಹರಿಯ ಬರಿಸಿದ ಕಂದಾ
ಕುಂಬಿಣಿಪತಿ ಕುಹಯೋಗವ ಕಳೆದಾ
ನಂಬಿದವರ ಪೊರೆವಾ ನಂಬಿದವರ ಪೊರೆವಾ | ೧ |
ಆದ್ಯ ಸತ್ಯಾಗ್ರಹಿ ವರ ಚಿಂತಾಮಣಿ
ಉದ್ ಗ್ರಂಥಗಳನು ರಚಿಸಿದ ದಿನಮಣಿ
ಮಧ್ವಮತೋದ್ಧಾರಾ ಮಧ್ವಮತೋದ್ಧಾರಾ | ೨ |
ಭೂಪತಿ ವಿಠಲನ ಪ್ರೀತಿ ವಿಖ್ಯಾತಾ
ಆಪದ್ಬಾಂಧವ ಅನಾಥ ನಾಥಾ
ರಥೋತ್ಸವದಿ ಮೆರೆವಾ ರಥೋತ್ಸವದಿ ಮೆರೆವಾ | ೩ |
***
Rathava nerida chandra Shree Raghavendra
adi padi kunidadi bajanemadu
bedida vara koduva bedida vara koduva| a.pa.|
kambhadi narahariya barisida kanda
kumbinipati kuhayogava kaleda
nambidavara poreva nambidavara poreva | 1 |
adya satyagrahi vara cintamani
ud granthagalanu racisida dinamani
madhvamatoddhara madhvamatoddhara | 2 |
Bhupati vithalana priti vikyata
apadbandhava anatha natha
rathotsavadi mereva rathotsavadi mereva | 3 |
***