Showing posts with label ಕಂಡೆ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು ಹಿಂಡ mahipati. Show all posts
Showing posts with label ಕಂಡೆ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು ಹಿಂಡ mahipati. Show all posts

Wednesday, 1 September 2021

ಕಂಡೆ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು ಹಿಂಡ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕಂಡೆ ಕಂಡೆ ಕಂಡೆವಯ್ಯ ಪಿಂಡ ಬ್ರಹ್ಮಾಂಡದೊಳು ಹಿಂಡ ದೈವದೊಡೆಯ ಪ್ರಚಂಡನ ಕಂಡೆ p


ದೀನನಾಥನ ಕಂಡೆ ದೀನೋದ್ಧಾರನ ಕಂಡೆ ಅನಾಥಜನರ ಪ್ರತಿಪಾಲನ ಕಂಡೆ 1 

ಶರಣ ರಕ್ಷಕನ ಕಂಡೆ ವಾರಿಜಾಕ್ಷನ ಕಂಡೆ ವರಮುನಿ ಜನರಾ ಪ್ರತ್ಯಕ್ಷನ ಕಂಡೆ 2 

ಭಕ್ತ ಪ್ರಿಯನ ಕಂಡೆ ಮುಕ್ತಿಯೀವನ ಕಂಡೆ ಪತಿತ ಪಾವನ ಗುರು ಸಂಜೀವನ ಕಂಡೆ 3 

ದೇವದೇವನ ಕಂಡೆ ಕಾವ ಕರುಣನ ಕಂಡೆ ಮಹಿಪತಿ ತಾರಕ ಗುರು ಭವನಾಶನ ಕಂಡೆ 4

****