..
kruti by ಬೇಲೂರು ವೈಕುಂಠ ದಾಸರು belur vaikunta dasaru
ತೇನಮೋ ಜಗದೇಕನಾಥ ರಮಾ
ಮಾನಸಾಂಬುಜರಾಜಹಂಸಾಯ ವಿಷ್ಣವೇ ಪ
ಅಗಣಿತಾವತಾರ ಅಸುರಸಂಹಾರ
ಜಗದೇಕವೀರ ಜನನಾದಿ ದೂರಾ
ನಿಗಮಪ್ರಕಾರ ನಿರ್ಮಲಾಚಾರ
ಸುಗುಣ ವಿಸ್ತಾರ ಸುಖಮಯ ಶರೀರ 1
ದಾನಗುಣಶೀಲ ಧರ್ಮಪರಿಪಾಲ
ಗಾನರಸಲೋಲ ಕನಕಮಯಚೇಲ
ದೀನಾರ್ತಿಹರಣ ತೀರ್ಥಮಯಚರಣ
ಆನತೋದ್ಧರಣ ಅಮೃತಾಬ್ಧಿಶಯನ 2
ಚಂದ್ರಾರ್ಕನಯನ ಚಾರುತರ ಕಥನ
ಇಂದ್ರಾರಿ ಮಥನ ಇಭವೈರಿವದನ
ಇಂದ್ರ ಸಂಕ್ರಮಣ ವೇಲಾಪುರಿಸದನ
ವಂದ್ಯಾಖಿಲಜನ ವೈಕುಂಠ ರಮಣ3
***