Showing posts with label ಒಂದೆರೆಡೇ ನಾ ಹೇಳಲುಎಂದಿಗು ತೀರವು prasannavenkata. Show all posts
Showing posts with label ಒಂದೆರೆಡೇ ನಾ ಹೇಳಲುಎಂದಿಗು ತೀರವು prasannavenkata. Show all posts

Sunday, 10 November 2019

ಒಂದೆರೆಡೇ ನಾ ಹೇಳಲುಎಂದಿಗು ತೀರವು ankita prasannavenkata

by ಪ್ರಸನ್ನವೆಂಕಟದಾಸರು
ಒಂದೆರೆಡೇ ನಾ ಹೇಳಲುಎಂದಿಗು ತೀರವು ಅಪರಾಧ ಸಿರಿಕೃಷ್ಣ ಪ.

ಪಾಪವ ಗಳಿಸಿದರೇನುಂಡಾರದ ಬಲ್ಲೆಆ ಪುಣ್ಯವಂತರ ಕೀರ್ತಿ ಬಲ್ಲೆಈಪರಿತಿಳಿದರು ಕೆಟ್ಟವೃತ್ತಿಯ ಬಿಡೆಆಪದ್ಬಂಧು ಇದೇನು ಮಾಯವೊ ಸ್ವಾಮಿ 1

ತಾಪತ್ರಯವನುಭವಿಸುವಾಗ ಪಶ್ಚಾತ್ತಾಪವಲ್ಲದೆ ಮಾತೊಮ್ಮಿಗಿಲ್ಲಶ್ರೀಪತಿನೋಡುಚಿತ್ತದಕಪಟವಿಷಯಾಲಾಪವೆವಿಡಿದಿದೆ ಹಿತ ಹೊಂದದಯ್ಯ 2

ಹಣ್ಣು ಹಂಚಿದ ತೆರ ಹೊತ್ತು ಹೋಯಿತು ಕಿಂಚಿತ್ಪುಣ್ಯ ಮಾಡಿಹೆನೆಂಬ ನಂಬಿಗಿಲ್ಲಚಿನ್ಮಯ ಮೂರುತಿ ಪ್ರಸನ್ವೆಂಕಟೇಶನಿನ್ನವನೆಂಬ ಹೆಮ್ಮೆಲಿ ಮಾಡಿದ ತಪ್ಪು 3
********