Audio by Mrs. Nandini Sripad
Audio by Vidwan Sumukh Moudgalya
ಶ್ರೀ ವಿಜಯದಾಸಾರ್ಯ ವಿರಚಿತ ಮಧ್ವಾಚಾರ್ಯರ ಸ್ತೋತ್ರ ಸುಳಾದಿ
ರಾಗ ಬಾಗೇಶ್ರೀ
ಧ್ರುವತಾಳ
ಶ್ರೀಮದ್ವಿಠಲ ಪಾದಾಂಬುಜ ಮಧುಪರಾಜಾ
ಶ್ರೀಮದಾಚಾರ್ಯ ಧೈರ್ಯ ಯೋಗ ಧುರ್ಯಾ
ಕಾಮವರ್ಜಿತ ಕೃಪಾಸಾಗರ ಯತಿರೂಪಾ
ರೋಮ ರೋಮ ಗುಣ ಪೂರ್ಣಪರಣಾ
ಸಾಮ ವಿಖ್ಯಾತ ಸಿದ್ಧ ಸುರರೊಳಗೆ ಪ್ರಸಿದ್ಧ
ಸೀಮ ರಹಿತ ಮಹಿಮ ಭುವನ ಪ್ರೇಮ
ತಾಮಸ ಜನದೂರ ದಂಡ ಕಮಂಡಲಧರ
ಶ್ರೀಮಧ್ವಮುನಿರಾಯ ಶೋಭನ ಕಾಯ
ಆ ಮಹಾ ಜ್ಞಾನದಾತ ಅನುಮಾನ ತೀರಥ
ಕೋಮಲಮತಿ ಧಾರ್ಯ ವೈಷ್ಣವಾರ್ಯ
ಕಾಮ ಸುತ್ರಾಮ ಶರ್ವ ಸುರನುತ ಗುರುಸಾರ್ವ
ಭೌಮಾತಿ ಭಯನಾಶ ಭಾರತೀಶಾ
ರಾಮಕೃಷ್ಣ ವ್ಯಾಸ ವಿಜಯವಿಠ್ಠಲನ ಹೃದಯ -
ಧಾಮದೊಳಗಿಟ್ಟ ಸತತ ಧಿಟ್ಟಾ ॥ 1 ॥
ಮಟ್ಟತಾಳ
ಹರಿಯೆ ಗುಣಶೂನ್ಯ ಹರಿಯೆ ನಿರಾಕಾರ
ಹರಿಯು ದೊರೆಯು ಅಲ್ಲ ಹರಿ ಪರತಂತ್ರ
ಹರಿಯು ದುರ್ಬಲನು ಹರಿಗೆ ಎಂಟು ಗುಣ
ಹರಿಯು ತಾನೆಂದು ತಾರತಮ್ಯವೆನದೆ
ಧರೆಗೆಲ್ಲ ಮಿಥ್ಯಾ ಪರಿ ಪರಿ ಕರ್ಮಗಳು
ಹರಿ ತಾನೇ ಪುಟ್ಟಿ ಚರಿಸುವ ಲೀಲೆಯಲಿ
ನರ ನಾನಾ ಜನ್ಮ ಧರಿಸಿ ತೋರುವನೆಂದು
ದುರುಳ ದುರ್ಮತದವರು ಸರಿ ಸರಿ ಬಂದಂತೆ
ವರಲಿ ಸಜ್ಜನರನ್ನು ತಿರಸ್ಕಾರವನೆ ಮಾಡಿ
ತಿರುಗುತಿರೆ ಇತ್ತ ಸುರರು ಕಳವಳಿಸಿ
ಪರಮೇಷ್ಠಿಗೆ ಪೇಳೆ ಹರಿಗೆ ಬಿನ್ನೈಸಲು
ಮರುತ ದೇವನೆ ಅವತರಿಸಿದ ಹರುಷದಲ್ಲಿ
ಕರುಣಾಕರ ಮೂರ್ತಿ ವಿಜಯವಿಠ್ಠಲರೇಯ
ಪರನೆಂದು ಸಾರಿ ಧರೆಯೊಳಗೆ ಮೆರೆದಾ ॥ 2 ॥
ತ್ರಿವಿಡಿತಾಳ
ಶೂನ್ಯವಾದಿ ಮಿಕ್ಕ ದುರ್ಮತದವರೆಲ್ಲ
ಸನ್ಯಾಯವಿಲ್ಲದ ವಚನದಿಂದ
ಸನ್ಯಾಸಿಗಳೆಂಬೊ ಗರ್ವವಲ್ಲದೆ ವೇದ
ಸನ್ಮತವಾಗದ ದುರ್ಲಕ್ಷಣ
ವನ್ನೆ ಕಲ್ಪಿಸಿ ಶುದ್ಧ ಆಚಾರವನೆ ಕೆಡಿಸಿ
ಭಿನ್ನವಿಲ್ಲವೆಂದು ತಿರುಗುತಿರೆ
ಪುಣ್ಯಶ್ಲೋಕ ನಮ್ಮ ವಿಜಯವಿಠ್ಠಲನ
ಸನ್ನುತಿಸದೆ ದ್ವೇಷವ ತಾಳಿರೆ ॥ 3 ॥
ಅಟ್ಟತಾಳ
ಇಪ್ಪತ್ತು ಒಂದು ಕುಭಾಷ್ಯವ ರಚಿಸಿರೆ
ಒಪ್ಪದಿಂದಲಿ ಗೆದ್ದು ಅವರವರ ಮಹಾ
ದರ್ಪವ ತಗ್ಗಿಸಿ ದಶ ದಿಕ್ಕು ಪೊಗಿಸಿ ಕಂ -
ದರ್ಪ ಜನಕನು ಸ್ವತಂತ್ರ ಗುಣಪೂರ್ಣ
ಅಪ್ಪಾರ ಮಹಿಮನು ಸಾಕಾರ ಸತ್ಪುರುಷ
ತಪ್ಪದೆ ತ್ರಿಲೋಕಕ್ಕೊಡೆಯ ಜಗಜ್ಜೀವ -
ನಪ್ಪನು ಸರ್ವಾಂತರಂಗದೊಳಗೆ ಬಿಡ -
ದಿಪ್ಪ ವಿಶ್ವಮೂರುತಿ ವಿಲಕ್ಷಣರೂಪ
ಸರ್ಪಶಯನ ನಮ್ಮ ವಿಜಯವಿಠ್ಠಲರೇಯ
ಮುಪ್ಪಿಲ್ಲದ ದೈವ ಅಜಭವ ಸುರವಂದ್ಯಾ ॥ 4 ॥
ಆದಿತಾಳ
ದರುಶನ ಗ್ರಂಥವ ರಚಿಸಿ ಸುಜನರಪಾಲಿಸಿ
ಮರುತಮತದ ಬಿರಿದೆತ್ತಿದೆ ಮಹಾಯತಿ
ಸರಿಗಾಣೆ ನಿಮಗೆಲ್ಲ ವರ್ಣಿಸಲೆನ್ನಳವೆ
ದುರುಳರ ಗಂಟಲಗಾಣ ವಿದ್ಯಾಪ್ರವೀಣಾ
ನೆರೆನಂಬಿದವರಿಗೆಲ್ಲ ಮನೋವ್ಯಥೆಗಳ ಬಿಡಿಸಿ
ವರ ಸುಭಕುತಿ ಭಕುತಿ ವಿರಕ್ತಿ ಮಾರ್ಗವ ತೋರಿಸಿ
ಪೊರೆವ ತತ್ವದ ವನಧಿ ಪೊಡವಿಯೊಳಗೆ
ಸುರನರೋರಗಾದಿಗೆ ಗುರುವೆ ಪರಮ ಗುರುವೆ
ಸರಸ ಸದ್ಗುಣ ಸಾಂದ್ರ ವಿಜಯವಿಠ್ಠಲರೇಯನ
ಚರಣವ ನಂಬಿದ ಪ್ರಧಾನ ವಾಯುದೇವಾ ॥ 5 ॥
ಜತೆ
ಅದ್ವೈತ ಮತಾರಣ್ಯ ದಾವಾ ವ್ಯಾಸಶಿಷ್ಯ
ಮಧ್ವಮುನಿ ವಿಜಯವಿಠ್ಠಲನ ನಿಜದಾಸಾ ॥
**************
ಶ್ರೀ ವಿಜಯದಾಸಾರ್ಯ ವಿರಚಿತ
ಶ್ರೀಮದಾಚಾರ್ಯರ ಸ್ತೋತ್ರ ಸುಳಾದಿ
ರಾಗ : ಭೈರವಿ
ಧೃವತಾಳ
ಶ್ರೀಮದ್ವಿಠಲಪಾದಾಂಬುಜಮಧುಪರಾಜಾ
ಶ್ರೀಮದಚಾರ್ಯ ಧೈರ್ಯ ಯೋಗ ದುರ್ಯಾ
ಕಾಮವರ್ಜಿತ ಕೃಪಾಸಾಗರ ಯತಿರೂಪ
ರೋಮ ರೋಮ ಗುಣಪೂರ್ಣ ಪರಣ
ಸಾಮವಿಖ್ಯಾತ ಸಿದ್ಧ ಸುರರೊಳಗೆ ಪ್ರಸಿದ್ಧ
ಸೀಮರಹಿತ ಮಹಿಮ ಭುವನಪ್ರೇಮ
ತಾಮಸಜನದೂರ ದಂಡಕಮಂಡಲುಧರ
ಶ್ರೀಮಧ್ವಮುನಿರಾಯ ಶೋಭನಕಾಯ
ಆ ಮಹಾಜ್ಞಾನದಾತ ಅನುಮಾನತೀರಥ
ಕೋಮಲಮತಿಧಾರ್ಯ ವೈಷ್ಣವಾರ್ಯ
ಕಾಮ ಸುತ್ರಾಮ ಶರ್ವ ಸುರನುತ ಗುರುಸಾರ್ವ-
ಭೌಮಾತಿಭಯನಾಶ ಭಾರತೀಶ
ರಾಮ-ಕೃಷ್ಣ-ವ್ಯಾಸ ವಿಜಯವಿಠಲನ ಹೃದಯ-
ದಾಮದೊಳಗಿಟ್ಟ ಸತತ ದಿಟ್ಟ
ಮಟ್ಟತಾಳ
ಹರಿಯು ಗುಣಶೂನ್ಯ ಹರಿಯು ನಿರಾಕಾರ
ಹರಿಯು ದೊರೆಯು ಅಲ್ಲ ಹರಿ ಪರತಂತ್ರ
ಹರಿಯು ದುರ್ಬಲನು ಹರಿಗೆ ಎಂಟುಗುಣ
ಹರಿಯು ತಾನೆಂದು, ತಾರತಮ್ಯವೆನದೆ
ಧರೆಯೆಲ್ಲ ಮಿಥ್ಯಾ ,ಪರಿಪರಿ ಕರ್ಮಗಳು
ಹರಿತಾನೆ ಪುಟ್ಟಿ ಚರಿಸುವ ಲೀಲೆಯಲಿ
ನರ ನಾನಾ ಜನ್ಮ ಧರಿಸಿ ತೋರುವೆನೆಂದು
ದುರುಳ ದುರ್ಮತದವರು ಸರಿಸರಿ ಬಂದಂತೆ
ವರಲಿ ಸಜ್ಜನರನ್ನು ತಿರಸ್ಕಾರವನೆ ಮಾಡಿ
ತಿರುಗುತಿರೆ , ಇತ್ತ ಸುರರು ಕಳವಳಿಸಿ
ಪರಮೇಷ್ಠಿಗೆ ಪೇಳೆ ಹರಿಗೆ ಬಿನ್ನೈಸಲು
ಮರುತದೇವನೆ ಆವತರಿಸಿದ ಹರುಷದಲಿ
ಕರುಣಾಕರಮೂರ್ತಿ ವಿಜಯವಿಠಲರೇಯ
ಪರನೆಂದು ಸಾರಿ ಧರೆಯೊಳಗೆ ಮೆರೆದ
ತ್ರಿವಿಡಿತಾಳ
ಶೂನ್ಯವಾದಿ ಮಿಕ್ಕ ದುರ್ಮತದವರೆಲ್ಲ
ಸನ್ಯಾಯವಿಲ್ಲದ ವಚನದಿಂದ
ಸನ್ಯಾಸಿಗಳೆಂಬೊ ಗರ್ವವಲ್ಲದೆ ವೇದ-
ಸನ್ಮತವಾಗದ ದುರ್ಲಕ್ಷಣ-
ವನ್ನೆ ಕಲ್ಪಿಸಿ , ಶುದ್ಧ ಆಚಾರವನೆ ಕೆಡಿಸಿ
ಭಿನ್ನವಿಲ್ಲವೆಂದು ತಿರುಗುತಿರೆ
ಪುಣ್ಯಶ್ಲೋಕ ನಮ್ಮ ವಿಜಯವಿಠಲನ
ಸನ್ನುತಿಸದೆ ದ್ವೇಷವತಾಳಿರೆ
ಅಟ್ಟತಾಳ
ಇಪ್ಪತ್ತುವೊಂದು ಕುಭಾಷ್ಯವ ರಚಿಸಿರೆ
ಒಪ್ಪದಿಂದಲಿ ಗೆದ್ದು ಅವರವರ ಮಹಾ-
ದರ್ಪವ ತಗ್ಗಿಸಿ , ದಶದಿಕ್ಕುಪಗಿಸಿ, ಕಂ-
ದರ್ಪ ಜನಕನು ಸ್ವತಂತ್ರ ಗುಣಪೂರ್ಣ
ಅಪ್ಪಾರಮಹಿಮ ಸಾಕಾರ ಸತ್ಪುರುಷ
ತಪ್ಪದೆ ತ್ರಿಲೋಕ್ಕಕ್ಕೊಡೆಯ ಜಗಜ್ಜೀವ-
ನಪ್ಪನು ಸರ್ವಾಂತರಂಗದೊಳಗೆ ಬಿಡ-
ದಿಪ್ಪ ವಿಶ್ವ ಮೂರುತಿ ವಿಲಕ್ಷಣ ರೂಪ
ಸರ್ಪಶಯನ ನಮ್ಮ ವಿಜಯವಿಠಲರೇಯ
ಮುಪ್ಪಿಲ್ಲದ ದೈವ ಅಜ-ಭವಸುರವಂದ್ಯ
ಆದಿತಾಳ
ದರುಶನಗ್ರಂಥವ ರಚಿಸಿ ಸುಜನರ ಪಾಲಿಸಿ
ಮರುತ ಮತದ ಬಿರಿದೆತ್ತಿದೆ ಮಹಾಯತಿ
ಸರಿಗಾಣೆ ನಿಮಗೆಲ್ಲಿ ವರ್ಣಿಸಲೆನ್ನಳವೆ
ದುರುಳರ ಗಂಟಲಗಾಣ ವಿದ್ಯಾಪ್ರವೀಣ
ನೆರೆನಂಬಿದವರಿಗೆಲ್ಲ ಮನೋವ್ಯಥೆಗಳಬಿಡಿಸಿ
ವರ ಸುಭಕುತಿ ಜ್ಞಾನ ವಿರಕ್ತಿ ಮಾರ್ಗವ ತೋರಿಸಿ
ಪೊರೆವ ತತ್ವದವನಧಿ ಪೊಡವಿಯೊಳಗೆ
ಸುರನರೋರಗಾದಿಗೆ ಗುರುವೆ ಪರಮಗುರುವೆ
ಸರಸ ಸದ್ಗುಣಸಾಂದ್ರ ವಿಜಯವಿಠಲರೇಯನ
ಚರಣವ ನಂಬಿದ ಪ್ರಧಾನ ವಾಯುದೇವ
ಜತೆ
ಅದ್ವೈತಮತಾರಣ್ಯದಾವ , ವ್ಯಾಸಶಿಷ್ಯ
ಮಧ್ವಮುನಿ ವಿಜಯವಿಠಲನ ನಿಜದಾಸ
********