ಶ್ರೀ ಗುರುರಾಮವಿಠಲ ದಾಸರ ರಚನೆ
ಹಸೆಗೆ ಬಾರೆ ಬಿಸಜಾಲಯೆ
ಅಸುರಾಂತಕನರಸಿಯೆ ನೀಬೇಗ ಪ
ಕುಸುಮಾಕ್ಷತೆ ಲಾಜಗಳಿಂದಲಿ ಮೇ-
ಲೆ ಸುರಾರ್ಚೆಲ್ಲಿ ಪ್ರಾರ್ಥಿಸುವರು ನಿನ್ನ ಅ.ಪ
ವೇದ ಘೋಷೆಯಿಂ ಧರಣೀ ಸುರರು
ಮೋದದಿಂದ ತಾವು ಪೊಗಳುತಿಪ್ಪರು
ಪಾದನೂಪುರವಲುಗದಂತೆ ನೀ ಸಂ-
ಮೋದವ ಬೀರುತ್ತ ಸುಜನರಿಗೆಲ್ಲ
1
ಗಿರಿಜಾವಾಣೀಯಾರ್ಕರವ ಕೊಡಲು
ಅರುಂಧತಿ ಮುಖರೆಚ್ಚರಿಕೆ ಪೇಳಲು
ಕರುಣಾರಸವ ಸುರಿಸುತ್ತ ನೀ ಭ-
ಕ್ತರು ಬೇಡಿದಿಷ್ಟಾವರವ ನೀಡಲು
2
ಜನಕನಸುತೇ ಜಕದೇಕ ಮಾತೆ
ಸನಕಾದಿ ಮುನಿಜನ ಸಂಸ್ತುತೆ
ವನಜಾಕ್ಷ ಗುರುರಾಮ ವಿಠ್ಠಲನ
ವಕ್ಷಮಂದಿರೆ ವಂದಿಪೆ ಇಂದಿರೆ
3
***