kruti by ananta kulkarni
ಸತ್ಯಪ್ರಮೋದ ಗುರುವೇ ನಿನ್ನ ಪಾದವ ನಂಬಿರುವೆ |
ಎಂದಿನಂತೆ ನಿನ್ನ ಬಳಿ ಬಂದಿರುವೆ ವರದ ಹಸ್ತವ ತೋರೋ ಗುರುವೆ ||
ಶ್ರೀಸುಧಾಚಾರ್ಯ ಶ್ರೀಪಾದರಾಜ ಶ್ರೀವ್ಯಾಸರಾಜರಿಗೆ ಪ್ರೀಯ |
ಶ್ರೀ ವಾದಿರಾಜರ ಯುಕ್ತಿಮಲ್ಲಿಕೆಗೆ ತಿಪ್ಪಣಿ ಬರೆದ ಧೀರ ||
ಶ್ರೀ ಸುಧಾಮಂಡನ ರಚಿಸಿ ದುರ್ವಾದಿಗಳನು ಬಾಯ್ ಮುಚ್ಚಿಸಿದೆ |
ವಿಜಯೀಂದ್ರ ವಿಜಯ ವೈಭವ ರಚಿಸಿ ಪರಿಮಳಾರ್ಯರಿಗೆ ಪ್ರಿಯನಾದೆ || ೧ ||
ನಿನ್ನ ಸಿಂಹ ಗರ್ಜನೆಯ ಕೇಳಿ ಓಡಿದರು ದುರ್ವಾದಿಗಳು |
ನಿನ್ನ ವಾಕ್ಚಾತುರ್ಯವ ಕಂಡು ಬೆರಗಾಗಿ ಹೋದರು ಪಂಡಿತರು ||
ಅಭಿನವ ಸತ್ಯಧ್ಯಾನರೆ ನಿಮ್ಮ ಮಹಿಮೆಯು ಬಲು ಅಪಾರ |
ಐದು ದಶಕಗಳ ಕಾಲ ಸೀತಾ ರಾಮರ ಪೂಜಿಸಿದೆ ಗುರುವೆ || ೨ ||
ವಾಯುಮತವೆ ಎಂದೆಂದಿಗು ಪರಮಶ್ರೇಷ್ಠವೆಂದು ಸಾರಿದೆಯೊ |
ಹರಿ: ಸರ್ವೋತ್ತಮ: ವಾಯು: ಜೀವೋತ್ತಮ: ||
ಎಂದು ಡಂಗುರವ ಹೊಡೆಸಿದೆಯೊ |
ಶ್ರೀಭಾವಭೋಧಕರ ಸನ್ನಿಧಿಯಲಿ ನಿರಂತರ ನೆಲೆಸೆದೆ ಗುರುವೆ || ೩ ||
ಹಂಸನಾಮಕನ ಪೀಠದಲಿ ಇಂದ್ರನಂತೆ ರಾಜ್ಯವಾಳಿದೆಯೊ |
ದ್ವೈತಸಿದ್ಧಾಂತದ ತತ್ವಗಳ ಎಲ್ಲಕಡೆಗಳಲಿ ಬೀರಿದೆಯೋ ||
ದೇವತೆಗಳು ನೀವು ಇದಕೆ ಸಂಶಯವೆ ಇಲ್ಲ |
ಅನುಮಾನತೀರ್ಥರ ಕೃಪೆಯು ನಮಗೆ ನಿತ್ಯ ದೊರಕುವಂತೆ ಮಾಡೋ ಗುರುವೆ || ೪ ||
ಶ್ರೀಸತ್ಯಾತ್ಮತೀರ್ಥರಲಿ ನಿಂತು ಅನವರತ ಕರುಣಿಸೊ |
ಬಂದ ಭಕ್ತರಿಗೆ ಅಭಯವ ನೀಡುತ ಮನದಲಿ ನೆಲೆಸೊ ||
ಪರಮ ಕರುಣಾಲು ಗುರುವೆ ಅಂತ:ಕರಣದ ಸೆಲೆಯಿರಲಿ |
ದಾಸ ಅನಂತಗೆ ಅಭಯವ ನೀಡುತ ಸದ್ಭಕ್ತರನ್ನು ಸಲಹೋ ಗುರುವೆ || ೫ ||
(by Anantha Kulkarni)
***