Showing posts with label ತಾಮರಸ ನೆರೆ ನಂಬಿದೆ jagannatha vittala. Show all posts
Showing posts with label ತಾಮರಸ ನೆರೆ ನಂಬಿದೆ jagannatha vittala. Show all posts

Saturday, 14 December 2019

ತಾಮರಸ ನೆರೆ ನಂಬಿದೆ ankita jagannatha vittala

ಜಗನ್ನಾಥದಾಸರು
ತಾಮರಸ ನೆರೆ ನಂಬಿದೆ ಪ

ಕಾಮಕ್ರೋಧವ ಕಳೆದು ನಿನ್ನ ನಾಮಾಮೃತವ
ಪ್ರೇಮದಲಿ ಎನಗುಣಿಸೋ ಸ್ವಾಮಿ ಅ.ಪ.

ಉಪರಾಗ ದಶಮಿ ದ್ವಾದಶಿ ದಿವಸ ಮೊದಲಾದ
ಉಪೇಕ್ಷೆ ಮಾಡಿ ಕಳೆದೆ
ಉಪಕಾರಯೆಂದು ನಿಜ ಉಕ್ತಿ ಪೇಳಿದರೆನಗೆ
ಅಪಕಾರ ಕಾಣುತಿದೆಕೋ
ನಿಪುಣನೆನಿಸುವೆನೆಂದು ಅe್ಞÁನಿಗಳ ಮುಂದೆ
ತಪ ವೃದ್ಧರನ್ನು ಹಳಿವೆ
ಸ್ವಪನದೊಳಗಾದರೊ ವೈರಾಗ್ಯ ಬಯಸದಲೆ
ಕಪಟ ಮನುಜರೊಳಾಡಿ ನಿನ್ನ ಮರೆದೆ ಸ್ವಾಮೀ 1

ಮಾರನ ಉಪಟಳಾಕಾರದಲಿ ನಾ ಬಲು
ಪೋರ ಬುದ್ಧಿಯನು ಮಾಡಿ
ಆರು ಇಲ್ಲದ ಸಮಯದೊಳವಳು ಕಣ್ಣು ಸನ್ನೆಯ ಮಾಡಿ
ಕೋರಿದ್ದು ಇತ್ತು ನೀಡಿ
ಕ್ರೂರಮಾನವರೊಳಗೆ ಆಡಿ
ವಾರಿಜನಾಭ ನಿನ್ನ ಆರಾಧನೆಯ ಮರೆದು
ಧಾರಿಣೀ ಭಾರದೆ ಪರಲೋಕ ಮರೆದೆ 2

ಭೂಸುರರು ಚಂಡಾಲ ಜಾತಿಯೆನ್ನದೆ ಬಲು
ಹೇಸಿಕಿಲ್ಲದೆ ತಿರುಗುವೆ
ಪರಿ ವೇಷವನು ಧರಿಸಿ ಮೆರೆದೇ
ಆಶೆಯುಳ್ಳ ಮಹಪಿಶಾಚಿಗೊಳಗಾಗಿ ಹರಿ
ದಾಸ ಸಹವಾಸ ಜರೆದೆ
ವಾಸುಕೀಶಯನ ವಸುದೇವತನಯನೆ ನಿನ್ನ
ದಾಸನೆನ್ನಿಸದೆ ಅಪಹಾಸ ಮಾನವನಾದೆ 3

ಹರಿದಾಸರ ಬಳಿ ಅರಘಳಿಗೆ ಕೂತರೆ
ಶಿರವ್ಯಾಧಿಯೆಂದೇಳುವೇ
ದುರುಳ ದುರ್ವಾರ್ತೆಗಳ ಪೇಳಲು ಹಸಿವು ತೃಷೆ
ಮರೆದು ಲಾಲಿಸಿ ಕೇಳುವೆ
ತರುಣಿ ಮಕ್ಕಳು ಎನ್ನ ಪರಿಪರಿ ಬೈದರೆ
ಪರಮ ಹರುಷವ ತಾಳುವೆ
ಗುರುಹಿರಿಯರೊಂದುತ್ತರವನಾಡಲು ಕೇಳಿ
ಧರಿಸಲಾರದೆ ನಾನು ಮತ್ಸರಿಪೆನವರೊಡನೇ 4

ನಾ ಮಾಡಿದಪರಾಧ ಎಣಿಸಿ ಬರೆದರೆ ಈ
ಭೂಮಂಡಲವು ಸಾಲದಿಹುದೊ
ಕ್ಷಮೆಯೊಳಗುಳ್ಳ ದುರ್ಮತಿ ಕೂಡಿಡಲು
ಈ ಮತಿಯ ಅದು ಪೋಲದು
ಹೋಮ ಜಪತಪಗಳನು ಎಷ್ಟು ಮಾಡಲು ಪಾಪ
ಸ್ತೋಮ ಎಂದಿಗು ಪೋಗದೊ
ಸಾಮಜವರದ ಜಗನ್ನಾಥ ವಿಠಲ ನಿನ್ನ
ಕಾಣಿ 5
********