Showing posts with label ಮಾಡಬಾರದೆ ಹರಿಪಾದ ಪೂಜೆ sirigurutandevarada vittala. Show all posts
Showing posts with label ಮಾಡಬಾರದೆ ಹರಿಪಾದ ಪೂಜೆ sirigurutandevarada vittala. Show all posts

Friday, 6 August 2021

ಮಾಡಬಾರದೆ ಹರಿಪಾದ ಪೂಜೆ ankita sirigurutandevarada vittala

 ..

Kruti by ಸಿರಿಗುರುತಂದೆವರದವಿಠಲರು sirigurutandevarada vittala 


ಮಾಡಬಾರದೆ ಹರಿಪಾದ ಪೂಜೆ ಪ


ಮಾಡಬಾರದೇನೋ ಕೂಡುತಾ ಸನಾದಿಬೇಡಿದೊರವನೀವ ಗಾಡಿಕಾರನ ಪೂಜೆ ಅ.ಪ.


ನರಜನ್ಮವು ಬರಿದೆ ಪೋಗುತಿದೆ ಗರುವತನದಿ ನೀಮೆರೆಯ ಬೇಡೆಲವೋ ಮಾರಜನಕ ಕೃಷ್ಣನನ್ನರಿತು ಪೂಜೆಯನು 1


ಬಲಿಯ ಮೆಟ್ಟಿದಾ ನೆಲವ ಮೂರಡಿ ಮಾಡಿ ಖೂಳ ಶಕಟನನ್ನುಕಾಲಲೊದ್ದು ಕೊಂದ ಶಿಲೆಯಾದಹಲ್ಯೆಯ ಸಲಹಿದ ಪಾದ 2


ಕರುಣಾಸಾಗರ ಕರಿವರದಾ ಕೃಷ್ಣ ದುರಿತಗಳನೆ ಕಳೆದುಪರಮಪದವನೀವ ಗರುಡಗಮನ ತಂದೆ ವರದ ವಿಠಲನ ಪೂಜೆ 3

***