Showing posts with label ಕಾಯಿ ಕಾಯಯ್ಯಾ ಭಜಕರ ಪ್ರಿಯಾ gurumahipati. Show all posts
Showing posts with label ಕಾಯಿ ಕಾಯಯ್ಯಾ ಭಜಕರ ಪ್ರಿಯಾ gurumahipati. Show all posts

Wednesday 1 September 2021

ಕಾಯಿ ಕಾಯಯ್ಯಾ ಭಜಕರ ಪ್ರಿಯಾ ankita gurumahipati

 

ಕೃತಿ ಕಾಖಂಡಕಿ ಕೃಷ್ಣದಾಸರು


ಕಾಯಿ ಕಾಯಯ್ಯಾ ಭಜಕರ ಪ್ರಿಯಾ ಪ


ಕಾಯ ಸುರಾವಳಿ ಸಾಹ್ಯನಿ ಶ್ರೀಕರ |

ಗ್ರಾಹಿ ಪರಾತ್ಪರ ಪಾಹಿ ಮುಕುಂದಾ 1


ಅಂಬರವರ್ಣ ಚಿದಂಬರ ವಾಸ ಪೀ

ತಾಂಬರಧರ ವಿಶ್ವಂಬರ ಕೃಷ್ಣಾ 2


ವಿಹಂಗ ತುರಂಗ ||ಭು||

ಜಂಗ ಶಯನ ಮಾತಂಗ ಸುವರದಾ 3


ಶ್ರೀಧರ ಭೂಧರ ರಿಪು ನಿಜ ಸೋದರ |

ಶ್ರೀ ದಾಮೋದರ ದೇವಾ 4


ಅತ್ರಿವರದ ಲೋಕತ್ರಯ ಜಿತ |

ಮಿತ್ರ ಸುತೇಜ ವಿಚಿತ್ರ ಚರಿತ್ರಾ 5


ಜಂಬುವಿಭೇದನ ಕುಂಭಜ ಶಂಭು ಸ್ವ

ಯಂಭು ಮುಖಾರ್ಚಿತ ಕುಂಭಿನಿ ರಮಣಾ6


ಸುಂದರ ನಿಜಗುಣ ಮಂದಿರ ಕೇಶವ |

ತಂದೆ ಮಹಿಪತಿ- ನಂದನ ಪ್ರಾಣಾ 7

***