ಮಾನ್ವಿ ಗುಂಡಚಾರ್ಯರು
ಕಾಯೋ ಕಾವೇರಿರಂಗ |
ಕಾರುಣ್ಯಪಾಂಗ |
ಕಾಯೊ ಕಾಯೊ ಕಾವೇರಿನಿಲಯನೆ |
ಕಾಯವಾಙ್ಮನಪೂರ್ವಕದಿ ತವ |
ತೋಯಜಾಂಘ್ರಿಯ ನಂಬಿದೆನು ಭವ |
ಮಾಯಗೆಲುವ ಉಪಾಯ ತೋರಿ |
ದೇವಾಧಿದೇವ ನೀನು |
ಪ್ರಣಯಜನರಿಗೆ |
ದೇವತರುಮಣಿಧೇನು |
ಎಂದರಿತು ನಿಷ್ಠಿಲಿ |
ಧಾವಿಸಿ ಬಂದೆ ನಾನು |
ರಘುವಂಶ ಭಾನು |
ಕಾವನಯ್ಯ ನೀನೊಲಿದು ಕರುಣದಿ |
ಪಾವಮಾನಿಯ ಶಾಸ್ತ್ರವರಿತು |
ಭಾವ ಭಕ್ತಿಲಿ ನಿನ್ನ ಪಾಡುವ |
ಕೋವಿದರ ಸೇವಕನ ಮಾಡಿ |
ಪನ್ನಂಗಪತಿ ಶಯನ |
ಶಿರಬಾಗಿ ಪ್ರಾರ್ಥಿಪೆ |
ಪನ್ನಂಗರಿಪುವಾಹನ |
ಎನ್ನಪರಾಧವ |
ಮನ್ನಿಸೋಹಯವದನ |
ವೈಕುಂಠಸದನ |
ನಿನ್ನನುಗ್ರಹ ಪೂರ್ಣಪಡೆದು |
ಧನ್ಯರೆನಿಸಿದ ಮಾನ್ಯ ಮಾನವಿ |
ಘನಗುರುಜಗನ್ನಾಥದಾಸರ |
ಸನ್ನಿಧಾನದಿ ಬಂದೆ ತಂದೆ |
ನೇಸರಕುಲಜಾತ ವೇದೋಕ್ತಕ್ರಮದಿಂ |
ಭೂಸುರಕರಪೂಜಿತ |
ಕೌಶಿಕನ ಯಜ್ಞವ |
ಪೋಷಕ ಪವನ ಪಿತ |
ಪಾವನ್ನಚರಿತ |
ವಾಸುದೇವಾನಂತಮಹಿಮ ವಿ |
ಭೀಷಣಪ್ರಿಯ ದೋಷಕಳೆಯುವ |
ಭೇಶಪುಷ್ಕರಣೀಶ ಕೇಶವ |
ದಾಶರಥೆ ಶ್ರೀಶ್ಯಮಸುಂದರ |
************
ಕಾಯೋ ಕಾವೇರಿ ರಂಗ ಕಾರುಣ್ಯ ಪಾಂಗ ||ಪ.||
ಕಾಯೊ ಕಾಯೊ ಕಾವೇರಿ ನಿಲಯನೆ ಕಾಯ ವಾಙ್ಮನಪೂರ್ಣದಲ್ಲಿಂದು
ತೋಯಜಾಂಘ್ರಿಯ ನಂಬಿದೆನೊ ಭವ ಮಾಯ ಗೆಲುವ ಉಪಾಯ ತೋರಿ ||ಅ.ಪ.||
ದೇವಾಧಿದೇವ ನೀನು ಪ್ರಣತಜನರಿಗೆ ದೇವತರುಮಣಿಧೇನು
ಎಂದರಿತು ನಿಷ್ಠಿಲಿ ಧಾವಿಸಿ ಬಂದೆ ನಾನು ರಘುವಂಶ ಭಾನು |
ಕಾವನಯ್ಯ ನೀ ಒಲಿದು ಕರುಣದಿ ಪಾವಮಾನಿಯ ಶಾಸ್ತ್ರವರಿತು
ಭಾವಭಕುತಿಲಿ ನಿನ್ನ ಪಾಡುವ ಕೋವಿದರ ಸೇವಕನ ಮಾಡಿ ||೧||
ಪನ್ನಂಗಪತಿಶಯನ ಶಿರಬಾಗಿ ಪ್ರಾರ್ಥಿಪೆ ಪನ್ನಂಗರಿಪುವಾಹನ
ಎನ್ನಪರಾಧವ ಮನ್ನಿಸೋ ಹಯವದನ ವೈಕುಂಠಸದನ |
ನಿನ್ನನುಗ್ರಹ ಪೂರ್ಣ ಪಡೆದು ಧನ್ಯರೆನಿಸಿದ ಮಾನ್ಯ ಮಾನವಿ
ಘನ್ನ ಗುರು ಜಗನ್ನಾಥದಾಸರ ಸನ್ನಿಧಾನದಿ ಬಂದೆ ಪ್ರಭುವೇ ||೨||
ನೇಸರಕುಲಜಾತ ವೇದೋಕ್ತ ಕ್ರಮದಿಂ ಭೂಸುರಕರ ಪೂಜಿತ
ಕೌಶಿಕನ ಯಜ್ಞವ ಪೋಷಕ ಪವನಪಿತ ಪಾವನ್ನ ಚರಿತ |
ವಾಸುದೇವಾನಂತ ಮಹಿಮ ವಿಭೀಷಣಪ್ರಿಯ ದೋಷ ಕಳೆಯುವ
ಭೇಶ ಪುಷ್ಕರಣೀಶ ಕೇಶವ ದಾಶರಥಿ ಶ್ರೀ ಶ್ಯಾಮಸುಂದರ ||೩||
***
kAyO kAvEri raMga kAruNya pAMga ||pa.||
kAyo kAyo kAvEri nilayane kAya vA~gmanapUrNadalliMdu
tOyajAMghriya naMbideno bhava mAya geluva upAya tOri ||a.pa.||
dEvAdhidEva nInu praNatajanarige dEvatarumaNidhEnu
eMdaritu niShThili dhAvisi baMde nAnu raghuvaMsha bhAnu |
kAvanayya nI olidu karuNadi pAvamAniya shAstravaritu
bhAvabhakutili ninna pADuva kOvidara sEvakana mADi ||1||
pannaMgapatishayana shirabAgi prArthipe pannaMgaripuvAhana
ennaparAdhava mannisO hayavadana vaikuMThasadana |
ninnanugraha pUrNa paDedu dhanyarenisida mAnya mAnavi
ghanna guru jagannAthadAsara sannidhAnadi baMde prabhuvE ||2||
nEsarakulajAta vEdOkta kramadiM bhUsurakara pUjita
koushikana yaj~java pOShaka pavanapita pAvanna charita |
vAsudEvAnaMta mahima vibhIShaNapriya dOSha kaLeyuva
bhEsha puShkaraNIsha kEshava dAsharathi shrI shyAmasuMdara ||3||
***