Showing posts with label ಬಂದು ಬಾರದಾಯಿತು ನೋಡಿ ಇಂದು ನರದೇಹ ಸಂಗವ ಮಾಡಿ gurumahipati. Show all posts
Showing posts with label ಬಂದು ಬಾರದಾಯಿತು ನೋಡಿ ಇಂದು ನರದೇಹ ಸಂಗವ ಮಾಡಿ gurumahipati. Show all posts

Wednesday 1 September 2021

ಬಂದು ಬಾರದಾಯಿತು ನೋಡಿ ಇಂದು ನರದೇಹ ಸಂಗವ ಮಾಡಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಬಂದು ಬಾರದಾಯಿತು ನೋಡಿ | ಇಂದು ನರದೇಹ ಸಂಗವ ಮಾಡಿ ಪ 


ಮುತ್ತಿನಂಥಾ ಜನುಮದಿ ಬಂದು | ಚಿತ್ತ ಬೆರಿಯನು ವಿಷಯದಲಿಂದು 1 

ಸಾಧು ಸಂತರ ಮೊರೆ ಹೋಗಲಿಲ್ಲಾ | ಹಾದಿ ತಪ್ಪಿ ಮುಕ್ತಿಯು ಹೋಯಿತಲ್ಲಾ 2 

ಆಹಾರ ನಿದ್ರೆ ಭಯ ರತಿಸಂದಾ | ಅಹರ್ನಿಶಿಯಲಿದೇ ಮನದಂಗಾ 3 

ನಾನಾ ಶಾಸ್ತ್ರದ ಮಾರ್ಗಕ ಹೋದೀ | ಗಾಣದೆತ್ತಿನಂದದಿ ಕುರುಡಾದಿ 4 

ತಂದೆ ಮಹಿಪತಿ ಸ್ವಾಮಿಯ ನೆನೆದು | ಬಂದದ್ದು ಸಾರ್ಥಕ ಮಾಡದೆ ಬೆರೆದು 5

****