ಅನಂತಪದ್ಮನಾಭ | ವಿಠ್ಠಲನೆ ನೀನಿವನಅನಂತ ಜನ್ಮದ ಪಾಪ | ಕಳೆದು ಸಲಹೋ ||ಪ||
ಗುಣಗಣಾರ್ಣವ ಸ್ವಾಮಿ | ಪೂರ್ಣಕರುಣೆಯೆಂದುನಿನಗೆ ನಾ ಬಿನ್ನೈಪೆ | ಸತತ ಹರಿಯೇ ||ಅ.ಪ.||
ಪಂಚ ಪರ್ವಾಖ್ಯ | ಅe್ಞÁನ ಮೋಹಗಳ ತವಸಂಚಿಂತನೆಯ ಕೊಟ್ಟು | ಹಂಚಿ ದೈತ್ಯರಿಗೇ |ಸಂಚಿತಾಗಮ ಕಳೆವ | ಸಂಚುಗಳ ನೀ ತೋರಿವಾಂಛಿತಪ್ರದನಾಗೊ | ಅಂಚೆವಹ ಪಿತನೇ ||1||
ಕಾಮ ಜನಕ ಸ್ವಾಮಿ | ಮಾಮನೋಹರ ದೇವಕಾಮ ಕ್ರೋಧಗಳಳಿದು | ಕಾಪಾಡೊ ಇವನಾ |ಭೀಮ ಭವ ತಾರಕವು | ನಾಮಸ್ಮøತಿಯೆಂಬಮೃತಯಾಮಯಾಮಕೆ ಉಣಿಸಿ | ರಾಮನೇ ಸಲಹೋ ||2||
ಮೂರೆರಡು ಭೇದಗಳು ತಾರತಮ್ಯ ವನರುಹಿಸಾರತಮ ನೀನೆಂಬ | ಸುe್ಞÁನವೀಯೋ |ಕಾರಣಿಕ ಶ್ರೀಹರಿಯೆ | ವೈರಾಗ್ಯ ಧನದಿ ಸಂಸಾರ ನಿಸ್ಸಾರೆಂಬ | ಸನ್ಮತಿಯ ನೀಯೋ ||3||
ದಾಸನಿವನೆಂದೆನುತ | ನೀ ಸಲಹ ಬೇಕಿವನಈಶಾದಿ ದಿವಿಜೇಡ್ಯ | ಶೇಷಶಾಯೀಕ್ಲೇಶ ಆನಂದಗಳು | ಶ್ರೀಶ ನಿನ್ನಿಂದೆಂಬಈಸು ಸನ್ಮತಿ ಕೊಟ್ಟು | ನೀ ಸಲಹಬೇಕೊ ||4||
ಸರ್ವವ್ಯಾಪ್ತ ಸ್ವಾಮಿ | ನಿರ್ವಿಕಾರನೆ ದೇವಸರ್ವಜ್ಞ ನೀನಿರಲು | ನಾ ಪೇಳ್ವುದೇನೋದರ್ವಿ ಜೀವನ ಕಾವ | ಸರ್ವಭಾರವು ನಿಂದುಸರ್ವ ಸುಂದರ ಗುರು ಗೋವಿಂದ ವಿಠಲಾ ||5||