Showing posts with label ವಾಸುದೇವ ನಿನ್ನವರ್ಮ ಕರ್ಮಂಗಳದೇಶ purandara vittala. Show all posts
Showing posts with label ವಾಸುದೇವ ನಿನ್ನವರ್ಮ ಕರ್ಮಂಗಳದೇಶ purandara vittala. Show all posts

Friday 6 December 2019

ವಾಸುದೇವ ನಿನ್ನವರ್ಮ ಕರ್ಮಂಗಳದೇಶ purandara vittala

ಪುರಂದರದಾಸರು
ರಾಗ ಸೌರಾಷ್ಟ್ರ ಛಾಪುತಾಳ

ವಾಸುದೇವ ನಿನ್ನ ಮರ್ಮ ಕರ್ಮಂಗಳ
ದೇಶದೊಳಗೆ ನಾ ಹೇಳಲೊ ||ಪ||
ಬೇಸರದೆ ಎನ್ನ ಹೃದಯಕಮಲದಲ್ಲಿ
ವಾಸವಾಗಿ ಸುಮ್ಮನಿದ್ದು ಕಾಯೊ, ಹರಿವಾಸುದೇವ ||

ತರಳತನದಲ್ಲಿ ತುರುವು ಕಾಯ ಹೋಗಿ
ಒರಳಿಗೆ ಕಟ್ಟಿದ್ದು ಹೇಳಲೊ
ದುರುಳತನದಲ್ಲಿ ಕೆನೆ ಮೊಸರನು ಕದ್ದು
ನಿರತ ನೀ ತಿಂದದ್ದು ಹೇಳಲೊ ||

ನೆರೆಹೊರೆ ಮನೆಗಳ ಹೊಕ್ಕು ನೀ ಬೆಣ್ಣೆಯ
ಅರಿಯದಂತೆ ಮೆದ್ದದ್ಹೇಳಲೊ
ದುರುಳನಾವನೆಂದು ಬೆದರಿಸಿದವರಿಗೆ
ಮರುಳುಗೊಳಿಸಿದ್ದು ಹೇಳಲೊ ||

ಮೌನಗೌರೀ ವ್ರತಗೋಸ್ಕರ ಮಕ್ಕಳ
ಮಾವನ ಕೊಂದದ್ದು ಹೇಳಲೊ
ನೀನಾಗಿ ತುರುಗಳ ಹಿಂಡು ಕಾಯಹೋದ
ಹೀನತನವ ನಾ ಹೇಳಲೊ ||

ತಾನಾಗಿ ಹಾಲು ಕೊಟ್ಟೆನೆಂದು ಬಂದವಳ
ಪ್ರಾಣವ ಕೊಂಡದ್ದು ಹೇಳಲೊ
ನೀನಾಗಿ ನೆರೆಮನೆ ವಾರ್ತೆಗಳೆಲ್ಲ
ನಾನಾಬಗೆ ಮಾಡಿದ್ಹೇಳಲೊ ||

ದುಷ್ಟ ಹಾವಿನ ಮೇಲೆ ತುಳಿದಂಥ ನಿನ್ನಯ
ದಿಟ್ಟತನವ ನಾ ಹೇಳಲೊ
ನೆಟ್ಟನೆ ಕಂಬವ ತಾಗಿ ದೈತ್ಯನ
ಮೆಟ್ಟಿ ತುಳಿದದ್ದು ನಾ ಹೇಳಲೊ ||

ಹಿಡಿ ತುಂಬ ಅವಲಕ್ಕಿ ಸಂಪಾದನೆ ಮಾಡಿ
ದೃಢತರ ಸಿರಿ ಕೊಟ್ಟದ್ಹೇಳಲೊ
ಮಡದಿ ಮಾತಿಗೆ ನೀನಂಜಿ ಪಾರಿಜಾತ
ಕಡು ಬೇಗ ತಂದದ್ದು ಹೇಳಲೊ ||

ಮಡದಿಮಗನ ತಂದು ಗುರುದಕ್ಷಿಣೆ ಕೊಟ್ಟು
ಬಡವನ ಗೆಳೆಯನೆಂದ್ಹೇಳಲೊ
ಒಡನೆ ಓಡುತ ದೈತ್ಯಗಂಜಿ ಗುಹೆಯೊ-
ಳಡಗಿಕೊಂಡದ್ದು ನಾ ಹೇಳಲೊ ||

ಕಟ್ಟಿ ಏಳು ದಿನ ಮಳೆಗಳ ಸುರಿಸಲು
ಬೆಟ್ಟವನೆತ್ತಿದ್ದು ನಾ ಹೇಳಲೊ
ಅಟ್ಟಿಸಿಕೊಂಡು ನೀ ಯಾಗಶಾಲೆಗೆ ಹೋಗಿ
ಹೊಟ್ಟೆಬಾಕನೆಂದು ಹೇಳಲೊ ||

ಧರೆಯನಾಳುವ ಶ್ರೀರಂಗಪಟ್ಟಣದಲ್ಲಿ
ಸ್ಥಿರವಾಗಿ ನಿಂತದ್ದು ಹೇಳಲೊ
ಕರುಣಿಸಿ ಬಾರಯ್ಯ ಪುರಂದರವಿಠಲ
ಪರಮ ದಯಾಳುವೆಂದು ಹೇಳಲೊ ||
***

pallavi

vAsudEva ninna marma karmangaLa dEshadoLage nA hELalO

anupallavi

bEsarade enna hrdaya kamaladalli vAsavAgi summaniddu kAyO hari vAsudEva

caraNam 1

taralatanadalli duruvu kAya hOgi oraLige kaTTiddu hELalo
duruLatanadalli kene mosaranu kaddu nirata nI tindaddu hELalo

caraNam 2

nere hore manegaLa hokku nI beNNeya ariyadante meddadhELalo
duruLanAvadendu pedarisidavarige maruLu golisiddu hELalo

caraNam 3

mauna gAurI vratagOskara makkaLa mAvana kondaddu hELalo
nInAgi durugaLa hiNDu kAya hOda hInatanava nA hELalo

caraNam 4

tAnAgi hAlu koTTenendu bandavana prANava kondaddu hELalo
nInAgi nere mane vArtegaLella nAnA bage mADidhELalo

caraNam 5

duSTa hAvina mEle tuLidantha ninnaya diTTatanava nA hELo
neTTane kambava tAgi daityana meTTi tuLidaddu nA hELalo

caraNam 6

hiDi tumba avalakki sampAdane mADi drDhadhara siri koTTadhELalo
maDadi mAtige nInanji pArijAta kaDu bEga tandaddu hELalo

caraNam 7

maDadi magana tandu gurudakSiNe koTTu baDavana geLeyanendhELalo
oDane Oduta daityaganji guheyoLa gaDagikoNDaddu nA hELalo

caraNam 8

kaTTi Elu dina maLegaLa surisalu beTTavaneddiddu nA hELalo
aTTisi koNDu nI yAga shAlage hOgi hoTTe bAkanendu hELalo

caraNam 9

dhareyoLuva shrIranga paTTaNadalli sthiravAgi nintaddu hELalo
karuNisi bArayya purandara viTTala parama dayALuvendu hELalo
***

ವಾಸುದೇವ ನಿನ್ನವರ್ಮ ಕರ್ಮಂಗಳದೇಶ ದೇಶದೊಳು ಹೇಳಲೆ ? ಪ

ಬೇಸರಿಯದೆ ಎನ್ನ ಹೃದಯ ಕಮಲದಲ್ಲಿವಾಸವಾಗಿ ಸುಮ್ಮನಿರುವೆಯೊ ? ಅ.ಪ

ಮತ್ಸರೂಪನಾಗಿ ಮನಸು ಕಾಣಿಸಿಕೊಂಡು ಮಕ್ಕಳತಿದ್ದಿದ್ದು ಹೇಳಲೆ ?ಉತ್ಸಾಹದಿಂದ ನಿಗಮವ ತಂದು ಬ್ರಹ್ಮಗೆ ಮೆಚ್ಚಿಕೊಟ್ಟದ್ದು ನಾ ಹೇಳಲೆ 1

ಕಡಗೋಲು ಮಂಡೆಯಂದದಿ ಕೈಕಾಲು ಮುದುಡಿಕೊಂಡದ್ದು ನಾ ಹೇಳಲೆ ?ಕಡಲೊಳಗಿಂದ ಪಾತಾಳಕೆ ಇಳಿದಿಳೆ ಪಡೆದಾತನ ಸುದ್ದಿ ಹೇಳಲೆ 2

ಹುಚ್ಚುಮನಸುಮಾಡಿ ಕಚ್ಚುತ ಕೆದರುತ ರಚ್ಚೆಯಿಕ್ಕಿದಸುದ್ದಿ ಹೇಳಲೆ ?ಮುಚ್ಚಿದ ಭೂಮಿಯ ಹಲ್ಲಿಂದ ಕಿತ್ತಿದ ಹೆಚ್ಚುತನವ ನಾನು ಹೇಳಲೆ 3

ಕಂದನ ಮಾತಿಗೆ ಕಡುಕೋಪದಿಂ ಬಂದು ಕಂಬವನೊಡೆದದ್ದು ಹೇಳಲೆ ?ಕುಂದದೆ ಹಿರಣ್ಯಕಶಿಪುವಿನುದರ ಸೀಳಿ ಕರುಳ್ಮಾಲೆಧರಿಸಿದ್ದು ಹೇಳಲೆ 4

ಬಾಲನಾಗಿ ಬ್ರಹ್ಮಚಾರಿ ವೇಷವ ತೋರಿ ಬಲಿಯ ಬೇಡಿದುದನು ಹೇಳಲೆ ?ಲೀಲೆಯಿಂದಲಿ ಧರೆಯಈರಡಿ ಮಾಡಿದ ಜಾಲತನ್ವನುನಾನು ಹೇಳಲೆ5

ಹೆಸರಿಲ್ಲದೆ ಹೋಗಿ ಹೆತ್ತತಾಯ್ ತಲೆಕುಟ್ಟಿ ಕೊಡಲಿಯ ಪಿಡಿದದ್ದು ಹೇಳಲೆ ?ಸೋಸಿ ದೈತ್ಯರನೆಲ್ಲ ರೋಸಿ ಪ್ರಾಣವ ಕೊಂಡ ದೋಷತನವ ನಾನು ಹೇಳಲೆ 6

ತಾಯ ಮಾತನೆಕೇಳಿ ತಮ್ಮನ ಒಡಗೂಡಿಅಡವಿಯೊಳಿದ್ದುದು ಹೇಳಲೆ ?ಮಾಯಾಸೀತೆಗಾಗಿ ರಾವಣನನು ಕೊಂದು ಮಹಿಮೆಯ ನೆರೆದದ್ದು ಹೇಳಲೆ ? 7

ತರಳತನದಲಿ ದುರುಳನಾಗಿ ಬಂದ ಒರಳೆಳೆತಂದದ್ದು ಹೇಳಲೆ(ಬೆರಳಿಂದ ಗಿರಿಯೆತ್ತಿ ಕಂಸನ ಕೊಂದ ಆ ) ದುರುಳತನದ ಸುದ್ದಿ ಹೇಳಲೆ 8..

9

ರಾಯ ರಾವುತನಾಗಿ ರಾಯರ ಮನೆ ಪೊಕ್ಕು ಕಡುಗವ ಪಿಡಿದದ್ದು ಹೇಳಲೆ ?ಆಯತದಿಂದ ಕಲಿಯಲಿದ್ದು ಮನುಜರ ಮಾಯವ ತೋರಿದ್ದು ಹೇಳಲೆ 10

ಧರೆಯೊಳಗಧಿಕವಾದ ಉರಗಗಿರಿಯಲ್ಲಿ ಸ್ಥಿರಿವಾಗಿನಿಂತದ್ದು ಹೇಳಲೆ ?ಕರುಣದಿಂ ಭಕುತರ ಪುರಂದರವಿಠಲನೆಂದು ನಾ ಹೇಳಲೆ 11 *
*********