ಶ್ರೀಶಾ ಉದ್ಧರಿಸುವ ಅಶೇಷ ಪಾಲಕ । ಕರು ।
ಣಾ ಸಮುದ್ರನೇ ಶ್ರೀನಿವಾಸಾ ಕೃಷ್ಣಾ ।
ದೋಷ ದೂರನೇ ನಿಜ ದಾಸರ ಸನ್ಮನ ।
ತೋಷಕ ಕಲಿ ಕೃತ ದೋಷ ।
ನಾಶಕ ಸದ್ಗುಣ ಸುವನಧೀ ।।
ವೀಶಗಮನ ಫಣೀಶಶಾಯಿ । ಸು ।
ರೇಶ ಭಕುತರ ಪೋಷಕನೆ । ತ ।
ದ್ದಾಸ ಜನ ಸಹವಾಸ ಕೊಡು । ಮಹಿ ।
ದಾಸ ಈ ಭವ ಕ್ಲೇಶ ಕಳೆದು ।। ಪಲ್ಲವಿ ।।
ಕಮಲಾ ರಮಣನೇ ಹೃತ್ಕಮಲಸ್ಥ ತವ ಪಾದ ।
ಕಮಲ ನಂಬಿದೆ ಯೆನ್ನ ಶಮಲಾ ಕಳೆದೂ ।
ಕಮಲಜ ಪಿತ ನಿನ್ನ ವಿಮಲ ಗುಣವನಿತ್ಯಾ ।
ದಮದಿಂದ ಸಂಯುಕ್ತವಾದ ।
ಶಮದಿಂದ ಗ್ರಂಥೋಕ್ತ ದಿವ್ಯ ಕ್ರಮದಿಂದಾ ।
ಮಾನಸದಿ ಧ್ಯೇನಿಪ ವಿಪುಲ ಸಂಪದಾ ।
ಯನಗೆ ಕೊಡು ಯಂದು ಪ್ರಾರ್ಥಿಸುವೆ ನಿನಗೆ ।
ನಮಿಪ ಜನರಿಗೆ ಬದಿಗನ್ಯೆಂತೆಂದೂ ಈ ಪರಿಯ ತಿಳಿದು ।
ನಮಿಸುವೆನು ನೀಯನಗೆ ನಿಜ ಬಂಧು ।
ಆನಂದ ಸಿಂಧು ಸುಮನಸರ ಹೃತ್ಕುಮುದವೆನಿಸಿ ।
ಅಮಿತ ಕ್ರಿಯವನು ಮಾಡಿಸುವಿ ಸಂಯಮಿ ಜನ ವರ ।
ಅಮರ ರಿಪುಕುಲ ದಮನಯನಗೆ ಸುಮನವಿತ್ತು ।। ಚರಣ ।।
ಸಾರ ಹೃದಯರ ಉದ್ಧಾರ ಮಾಡುವಿ ನೀ । ಉ ।
ದಾರ ಯಾದವ ಕುಲ ವೀರಾ ಧೀರಾ ।
ಚಾರು ಸನ್ಮಹಿಮಾನೇ ಮಾರ ಜನಕನೇ ಸೃಷ್ಟಿ ಕಾರಣ । ಸಂ ।
ಸಾರ ವನಧಿಗೆ ತಾರಣ ।
ಕರಿರಾಜ ರಿಪು ನಿವಾರಣಾ ನಾ ನಿನ್ನ ಚರಣಕೆ ।
ಸಾರಿದೆನು ಮುರವೈರಿ ನರಹರಿಯೇ ಉದ್ಧವ ।
ವರದ ಸುಕುಮಾರ ಅನುಪಮ ಅಮಿತ ಮಹ ।
ಸಿರಿಯೇ ಇಂದ್ರಾತ್ಮಜಗೆ ನೀ ಸಾರಥಿ ವಿಬುಧೇಶರಿಗೆ ।
ಧೊರಿಯೇ ರಜನೀಶ ಕುಲಜನೆ ।
ವಾರಿಚರ ಕಿಟ ಮನುಜ ಮೃಗ ಬಲಿ ।
ವೈರಿ ಸ್ವರ್ಗದ ವನ್ಹಿಗನೇ ನಿಜ ।
ವೀರ ಪಾರ್ಥ ಪಸುಗತ ಕಲ್ಕಿಯೇ ।
ಸಾರ ತತ್ತ್ವ ವಿಚಾರಮತಿ ಕೊಡು ।। ಚರಣ ।\
ಮಂದಜಾನಸ ವಾಯು ನಂದಿವಾಹನ । ವಿಹ ।
ಗೇಂದ್ರ ಪ್ರಮುಖ ಸುರವೃಂದ ವಂದ್ಯಾ ।
ಇಂದಿರೆ ರಮಣನೇ ಮಂದಾಕಿನಿಯ ಪಿತ ।
ಯಿಂದೆನ್ನ ಬಿನ್ನಪವ ಕೇಳಿ ।
ಮಂದನ್ನ ದುಷ್ಕಾರ್ಯ ಕಾರಣ ।
ನಿಂದೆನ್ನ ದೂರಿ ಕೃತನ್ನಾ ।
ಚಂದದಿಂದಲೀ ಮಾಡುವನೆ ನೀನೆ ನಿನ್ಹೊರತು ಇನ್ನು ।
ಪೊಂದಿದವರನು ಪೊರೆವವರನಾ ಕಾಣೆ ಅಜಾಮಿಳ ಪ್ರಮುಖ ।
ರಾನಂದ ಬಡಿಸಿದ ಪರಮ ಪ್ರಭು ನೀನೆ । ಅರ ।
ವಿಂದ ನೇತ್ರನೇ ಹಿಂದೆ ಮುಂದೆ ಇಂದು ನೀ ಗತಿಯೆಂದು ।
ನಂಬಿದೆ ಕರವ ಪಿಡಿಯೋ ತಂದೆ ಶ್ರೀಪತಿ ವಿಠ್ಠಲಈ ಭವ ।
ಸಿಂಧುವಿನ ಗತಿಯೆಂದು ಶೀಘ್ರದಿ ।। ಚರಣ ।।
***
ರಾಗ : ಮೋಹನ ತಾಳ : ಅಟ್ಟ (raga, taala may differ in audio)