ಪುರಂದರದಾಸರು
ರಾಗ - : ತಾಳ -
ಒಳ್ಳೆಯದೊಳ್ಳೆಯದು ll ಪ ll
ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದುದು ಬಲ್ಲಿದತನವೆ ll ಅ ಪ ll
ಬಿಡೆನೊ ಬಿಡೆನೊ ಎನ್ನ ಒಡೆಯ ತಿರುಮಲ ನಿನ್ನ l
ಉಡಿಯ ಪೀತಾಂಬರ ಪಿಡಿದು ನಿಲಿಸಿಕೊಂಬೆ ll ೧ ll
ಅರಿವು ಮರೆವು ಮಾಡಿ ತಿರುಗಿಸಿದೆಯಾ ಎನ್ನ l
ಕೊರಳಿಗೆ ನಿನ್ನಯ ಚರಣ ಕಟ್ಟಿಕೊಂಬೆ ll ೨ ll
ಅತ್ತೆಯ ಮಕ್ಕಳಿಗೆ ತೆತ್ತಿಗ ನೀನಾಗಿ l
ವಿತ್ತದ ರಾಶಿ ತಂದಿತ್ತ ಪರಿಯಲಿ ll ೩ ll
ಅತ್ತಲಿತ್ತಲಿ ನೋಡಿನ್ನೆತ್ತ ಪೋಗಲಿ ನಿನ್ನ l
ಚಿತ್ರದಲಿ ಹೊತ್ತು ಕಟ್ಟಿಕೊಂಬೆನು ll ೪ ll
ಇರುಳು ಹಗಲು ಬಿಡದೆ ವರಪುರಂದರಗೊಲಿದೆ
ಅರಿದು ಏನು ಇಷ್ಟು ಪುರಂದರವಿಟ್ಠಲನೆ ll ೫ ll***
ಒಳ್ಳೆಯದೊಳ್ಳೆಯದು ಪ
ಎಲ್ಲ ಸ್ಥಳವ ಬಿಟ್ಟು ಇಲ್ಲಿ ಅಡಗಿದುದು ಬಲ್ಲಿದತನವೆ ? ಅ.ಪ
ಬಿಡೆನೊ ಬಿಡೆನೊ ಎನ್ನ ಒಡೆಯ ತಿರುಮಲ ನಿನ್ನ |ಉಡೆಯ ಪೀತಾಂಬರ ಪಿಡಿದು ನಿಲಿಸಿಕೊಂಬೆ 1
ಅರಿವುಮರೆವು ಮಾಡಿ ತಿರುಗಿಸಿದೆಯಾ ಎನ್ನ |ಕೊರಳಿಗೆ ನಿನ್ನಯಚರಣಕಟ್ಟಿಕೊಂಬೆ 2
ಅತ್ತೆಯ ಮಕ್ಕಳಿಗೆ ತೆತ್ತಿಗ ನಿನಗಾಗಿ |ಎತ್ತದ ರಾಶಿ ತಂದಿತ್ತ ಪರಿಯಲಿ 3
ಅತ್ತಲಿತ್ತಲಿ ನೋಡಿನ್ನೆತ್ತ ಪೋಗಲಿ ನಿನ್ನ |ಚಿತ್ತದಲ್ಲಿ ಹೊತ್ತು ಕಟ್ಟಿಕೊಂಬೆನು 4
ಇರುಳು ಹಗಲು ಬಿಡೆದೆ ವರಪುರಂದರಗೊಲಿದೆ |ಅರಿದುಏನು ಇಷ್ಟು ಪುರಂದರವಿಠಲನೆ 5
******