Showing posts with label ಕಾಯೆ ಶ್ರೀ ಹರಿ ಜಾಯೆ ಸಜ್ಜನಪ್ರೀಯೆ ಸುರಮುನಿ mohana vittala KAAYE SRI HARI JAAYE SAJJANAPRIYE SURAMUNI. Show all posts
Showing posts with label ಕಾಯೆ ಶ್ರೀ ಹರಿ ಜಾಯೆ ಸಜ್ಜನಪ್ರೀಯೆ ಸುರಮುನಿ mohana vittala KAAYE SRI HARI JAAYE SAJJANAPRIYE SURAMUNI. Show all posts

Friday 3 December 2021

ಕಾಯೆ ಶ್ರೀ ಹರಿ ಜಾಯೆ ಸಜ್ಜನಪ್ರೀಯೆ ಸುರಮುನಿ ankita mohana vittala KAAYE SRI HARI JAAYE SAJJANAPRIYE SURAMUNI



ಕಾಯೆ ಶ್ರೀ ಹರಿ ಜಾಯೆ ಸಜ್ಜನಪ್ರೀಯೆ ಸುರಮುನಿ ಗೇಯೆ ಪ


ತಾಯೇ ಎನ್ನಯ ಕಾಯ ನಿನ್ನದುಕಾಯೇ ಕರುಣಾಬ್ಧಿಯೇಅ.ಪ.


ಪದ್ಮ ಮಂದಿರೆ ಪದ್ಮ ಗಂಧಿನಿಪದ್ಮಕುಚ ರಾಣಿ ಪದ್ಮಶರ ಮಾತೇಪದ್ಮ ಬಾಂಧವೆ ಪದ್ಮರಿಪು ತಾಯೆ ||ಪದ್ಮಿ ಪದ್ಮಾಕ್ಷಿ ಪದ್ಮಾಭಿನ್ನ ಪದ್ಮಪಾದ ಹೃ-ತ್ಪದ್ಮದೊಳಗಿಟ್ಟ ಮುದ್ದು ಮಹಾ ಲಕುಮೀ 1

ಮೂಕ ದಾನವನ ಕೊಂದು ಅವನಕೊಂಕು ಮನ್ನಿಸಿದ ಮೂಕಾಂಬಿಕೆಯೇಶ್ರೀಕಲಾ ಪಾಲಸಾಗರವಾಗಿ ಸಾಕಿದೆ ಋಷಿಯಾ ||ವಾಕೇಶ ಶಿವ ಪಾಕಶಾಸನ-ನೇಕ ಜನ ಪುಷ್ಪ ವೃಷ್ಟಿ ಗರೆಯಾಲುಈ ಕೊಲ್ಲೂರೊಳು ನೀ ಕರುಣದಿ ನಿಂದೀ 2

ನಿನ್ನ ಪಾದಾಬ್ಜವನ್ನು ಅನುದಿನಸನ್ನುತಿಸುವೆ ಚೆನ್ನ ವಿಜಯ ರಾ-ಯನ್ನ ಮನೆ ಮುಂದೆ ಕುನ್ನಿಯನ್ನೇ ಮಾಡಿ ಎನ್ನ ಪುಟ್ಟಿಪುದು ||ಪನ್ನಗವೇಣಿ ಘನ್ನ ದುರಿತಾಬ್ಧಿಯನ್ನೆ ದಾಟಿಸಿನಿನ್ನ ಆಳ್ವ ಮೋಹನ ವಿಠ್ಠಲ ರಾಯನ್ನ ಎನಗೆ ತೋರೆ 3

***