Showing posts with label ಮಂಗಳಂ ಜಯಮಂಗಳಂ ಶಕುತಿಯಿಂದಲಿ ಶಿಶುಪಾಲಾದಿ purandara vittala. Show all posts
Showing posts with label ಮಂಗಳಂ ಜಯಮಂಗಳಂ ಶಕುತಿಯಿಂದಲಿ ಶಿಶುಪಾಲಾದಿ purandara vittala. Show all posts

Thursday, 5 December 2019

ಮಂಗಳಂ ಜಯಮಂಗಳಂ ಶಕುತಿಯಿಂದಲಿ ಶಿಶುಪಾಲಾದಿ purandara vittala

ರಾಗ ಸೌರಾಷ್ಟ್ರ ಆದಿತಾಳ

ಮಂಗಳಂ ಜಯಮಂಗಳಂ ||ಪ||

ಶಕುತಿಯಿಂದಲಿ ಶಿಶುಪಾಲಾದಿ
ಸಕಲ ಮಹಾರಾಯರ ಕಾದಿ
ರುಕುಮನ ಗೆಲಿದು ರೂಢಿಯಿಂದಲಿ ತಂದು
ರುಕುಮಿಣಿಯಾಳಿದ ಶ್ರೀಕೃಷ್ಣಗೆ ||

ಕಾಳಗದಿ ನರಕಾಸುರನ
ಸೀಳಿ ಬೀಸಾಡಿ ಕೈಸೆರೆ ಪಿಡಿದು
ಸೋಳಸಾಸಿರ ಸುದತಿಯರೆಲ್ಲರ
ಆಳಿದ ವಾಸುದೇವಾತ್ಮಜಗೆ ||

ಸರಸಿಜಭವ ದನುಜರು ಕ್ಷೀರ
ಶರಧಿಯ ಮಥಿಸಲು ಸಂಭ್ರಮದಿ
ಸಿರಿಯು ಜನಿಸಲು ವರಿಸಿದ ನಿತ್ಯದಿ
ವರದ ಪುರಂದರವಿಟ್ಠಲಗೆ |||
*******