Showing posts with label ಮತವೆಂದರೆ ಮಧ್ವ ಮತವೇ ಮತವು ಶ್ರುತಿ ಸ್ಮøತಿ ತತಿಗೆ narahari P. Show all posts
Showing posts with label ಮತವೆಂದರೆ ಮಧ್ವ ಮತವೇ ಮತವು ಶ್ರುತಿ ಸ್ಮøತಿ ತತಿಗೆ narahari P. Show all posts

Thursday, 5 August 2021

ಮತವೆಂದರೆ ಮಧ್ವ ಮತವೇ ಮತವು ಶ್ರುತಿ ಸ್ಮøತಿ ತತಿಗೆ ankita narahari P

..

kruti by pradyumna teertha ಪ್ರದ್ಯುಮ್ನತೀರ್ಥರು


ಮತವೆಂದರೆ ಮಧ್ವ ಮತವೇ ಮತವು

ಶ್ರುತಿ ಸ್ಮøತಿ ತತಿಗೆ ಸಮ್ಮತವಾದುದರಿಂದ ಪ


ಮಧುವೆಂದರಾನಂದ ಒದಗಿ ಬರುವುದು ಸತ್ಯ

ಮಧುವೈರಿ ಒಲಿದು ಪಾದವ ತೋರುವ

ಸದಮಲ ಭಾವದಲಿ ಮೇದಿನಿಯೊಳಗಿನ್ನು

ಮದಮತ್ಸರಿಲ್ಲದೆಲೆ ಮುದದಿಯೋಚಿಸಲಾಗಿ 1

ವ ವರ್ಣವೆಂದರೆ ಶ್ರೀ ವರನ ಜ್ಞಾನವು

ಪವನಪಿತ ತಾ ಒಲಿದು ಈವನದನು

ಹೇವವಿಲ್ಲದೆ ಶುದ್ಧ ಭಾವದಿಂದಾಚರಿಸೆ

ಭವ ದೂರಗೈಸಿ ಪಾವನಮಾಳ್ಪೊದದರಿಂದ 2

ಮತವೆಂದರೆ ನಮ್ಮ ರತಿ ಪತಿ ಪಿತಭಾವ

ಸತತ ಸಮ್ಮತಿಯಿತ್ತು ಖತಿಯಳಿವದೈ

ಕ್ಷಿತಿಯೊಳಗೆ ಪಿತ ಶ್ರೀ ನರಹರಿಯ ಪದಪದುಮ

ಅತಿ ತೀವ್ರದಲಿ ತೋರಿ ಖ್ಯಾತಿ ತಂದೀವುದಕೆ 3

***