..
kruti by pradyumna teertha ಪ್ರದ್ಯುಮ್ನತೀರ್ಥರು
ಮತವೆಂದರೆ ಮಧ್ವ ಮತವೇ ಮತವು
ಶ್ರುತಿ ಸ್ಮøತಿ ತತಿಗೆ ಸಮ್ಮತವಾದುದರಿಂದ ಪ
ಮಧುವೆಂದರಾನಂದ ಒದಗಿ ಬರುವುದು ಸತ್ಯ
ಮಧುವೈರಿ ಒಲಿದು ಪಾದವ ತೋರುವ
ಸದಮಲ ಭಾವದಲಿ ಮೇದಿನಿಯೊಳಗಿನ್ನು
ಮದಮತ್ಸರಿಲ್ಲದೆಲೆ ಮುದದಿಯೋಚಿಸಲಾಗಿ 1
ವ ವರ್ಣವೆಂದರೆ ಶ್ರೀ ವರನ ಜ್ಞಾನವು
ಪವನಪಿತ ತಾ ಒಲಿದು ಈವನದನು
ಹೇವವಿಲ್ಲದೆ ಶುದ್ಧ ಭಾವದಿಂದಾಚರಿಸೆ
ಭವ ದೂರಗೈಸಿ ಪಾವನಮಾಳ್ಪೊದದರಿಂದ 2
ಮತವೆಂದರೆ ನಮ್ಮ ರತಿ ಪತಿ ಪಿತಭಾವ
ಸತತ ಸಮ್ಮತಿಯಿತ್ತು ಖತಿಯಳಿವದೈ
ಕ್ಷಿತಿಯೊಳಗೆ ಪಿತ ಶ್ರೀ ನರಹರಿಯ ಪದಪದುಮ
ಅತಿ ತೀವ್ರದಲಿ ತೋರಿ ಖ್ಯಾತಿ ತಂದೀವುದಕೆ 3
***
No comments:
Post a Comment