Showing posts with label ಅಧಮನಲ್ಲವೆ ಅವನು ಅಧಮನಲ್ಲವೆ vijaya vittala. Show all posts
Showing posts with label ಅಧಮನಲ್ಲವೆ ಅವನು ಅಧಮನಲ್ಲವೆ vijaya vittala. Show all posts

Thursday, 17 October 2019

ಅಧಮನಲ್ಲವೆ ಅವನು ಅಧಮನಲ್ಲವೆ ankita vijaya vittala

ವಿಜಯದಾಸ
ಅಧಮನಲ್ಲವೆ ಅವನು ಅಧಮನಲ್ಲವೆ |
ಯದುಪತಿಯ ಭಜಿಸಿ ಸದಾ | ಬದುಕದಿದ್ದ ನರಜನ್ಮ ಪ

ಕರವ ಮುಗಿದು ಜಿಹ್ವೆಯಲ್ಲಿ |
ಹರಿ ಹರಿ ಎಂದು ಸ್ಮರಣೆ ಮಾಡಿ | ಹರುಷವಾಗದಿದ್ದ ನರನು 1

ಕುಡತಿ ಜಲವ ಕೊಂಡು ರವಿಗೆ |
ಕಡಿಯದಘ್ರ್ಯವೆರೆದು ಪುಣ್ಯ | ಪಡೆಯದಿದ್ದ ಹೀನ ನರನು 2

ಹಾದಿ ಹಿಡಿತು ಬರುತ ಸುಮ್ಮನಾದರನ್ನ | ಇರದೆ ವೇಣು |
ನಾದ ಕೃಷ್ಣ ಕೃಷ್ಣಯೆಂದೂ | ಓದಿಕೊಳುತ ಬಾರದವನು 3

ಕಲಶ ತುಂಬಿದ ನೀರು ತಂದು ಕುಳಿತು ಘಳಿಗೆ |
ಕೊಳದ ಯಿದ್ದ ಹೀನ ನರನು 4

ಪೊಡವಿಯರಸ ಕೇಶವನ್ನ |
ಅಡಿಗೆ ಏರಿಸಿ ನಗುತ ತನ್ನ | ಮುಡಿಯಲಿಟ್ಟುಕೊಳದ ನರನು |5

ಸಿರಿ | ವಿಠ್ಠಲನ ಮುಂದೆ ತಂದು |
ಇಟ್ಟು ಅರ್ಪಿತವೆಂದು ಸುಖ | ಬಟ್ಟು ಉಣದ ಮಂಕು ನರನು6

ಉಂಡು ತಿಂದು ತೇಗಿಕೊಳುತ | ತಂಡ ತಂಡದ ವಿಷಯದಲ್ಲಿ |
ಭಂಡನಾಗಿ ನಮ್ಮ ಕೃಷ್ಣ ಭಂಡನೆಂದೂ ಅನದ ನರನು 7

ಊರು ಕೇರಿಗೆ ಪೋಗುವಾಗ | ಭಾರಪೊತ್ತು ತಿರುಗುವಾಗ |
ಕಂಸಾರಿ ಎನದ ಹೀನ ನರನು 8

ಮಂತ್ರವಿಲ್ಲ ತಂತ್ರವಿಲ್ಲ | ಕಂತುಪಿತನ ಮುಂದೆ ನಿಂತು |
ಸಂತರ್ಪಣೆ ಎಂದು ಮನದಿ | ಚಿಂತೆ ಮಾಡದಿದ್ದ ನರನು 9

ಮಲಗಿ ನಿದ್ರೆಗೊಳುತರೊಮ್ಮೆ | ಕಳವಳಿಸಿ ಭೀತಿಯಲಿ |
ತಳಮಳವಗೊಂಡು ಹರಿಯ | ಜಲಜಪಾದ ನೆನೆಯದವನು 10

ಎಲ್ಲ ಬಿಟ್ಟು ವಿಜಯವಿಠ್ಠಲ ವೆಂಕಟನೆ ದೈವ |
ಸೊಲ್ಲು ಪೇಳಿ ಬಾಳದವನು 11
*********