Showing posts with label ಹಿಡಿ ಮನವೇ ಸಂತರ ಸಂಗ gurumahipati. Show all posts
Showing posts with label ಹಿಡಿ ಮನವೇ ಸಂತರ ಸಂಗ gurumahipati. Show all posts

Wednesday, 1 September 2021

ಹಿಡಿ ಮನವೇ ಸಂತರ ಸಂಗ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಹಿಡಿ ಮನವೇ ಸಂತರ ಸಂಗ ಪ 


ಹಿಡಿಮನವೇ ಸಂತರ ಸಂಗಾ | ಭವ ಭಯ ಭಂಗಾ | ಅಡಿಗಳಗೆರಗುತ ಸಾಷ್ಟಾಂಗಾ | ಪಡಕೋ ಚಿತ್ಸುಖದಂಗಾ 1 

ಸಿಕ್ಕಿದು ಭಾಗವತರಣ | ಶರಣಾ | ಸಿಕ್ಕಲು ದಕ್ಕಿಸಿಕೋ ಕರುಣಾ | ಉಕ್ಕಲು ಜ್ಞಾನದಾ ನಿಜ ಸ್ಪರಣಾ | 2 

ಗುಕ್ಕದವನೇ ತಾ ಹರಿಶರಣಾ | ಶರಣೆಂಬುದು ಸು¯ಭವಲ್ಲಾ | ಹರಿಮಯ ಕಾಂಬನು ಜಗವೆಲ್ಲಾ | ನೆರೆ ಹಮ್ಮ ಮಾತುಗಳುಳದಿಲ್ಳಾ | ಸರಿ ಸ್ತುತಿ ನಿಂದೆಗೆ ಬಗಿಬಲ್ಲಾ 3 

ಎಲ್ಲರ ಮನದಂತಾನಾಗಿ | ನಿಲ್ಲುವ ಜನದೊಳು ನಿಜಯೋಗಿ | ಫುಲ್ಲನಾಭನ ಭಕುತಿಲಿ ಮುಣುಗಿ | ಬಲ್ಲವಿಕೆಯ ದೋರನು ಬಾಗೇ 4 

ಏನೋ ಜ್ಞಾನಿಗಳಾನಂದಾ | ತಾನೇ ಬಲ್ಲನು ಶ್ರೀ ಗೋವಿಂದಾ | ಖೂನಕ ಸಾರಿದ ನುಡಿವಂದಾ | ಸ್ವಾನುಭವದೀ ಮಹಿಪತಿ ಕಂದಾ 5

***