Showing posts with label ಪಾದ ವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ vijaya vittala. Show all posts
Showing posts with label ಪಾದ ವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ vijaya vittala. Show all posts

Wednesday, 16 October 2019

ಪಾದ ವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ ankita vijaya vittala

ವಿವಿಜಯದಾಸ
ಪಾದ ವಿಮಲ ಮತಿಯನಿತ್ತು ಅಮಲನ್ನ ಮಾಡಿಸೇ ಪ

ಗಜರಾಜ ಗಮನೆಯೆ ತ್ರಿಜಗದ್ವಂದ್ಯಳೆಂದು
ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೇ 1

ಅಷ್ಟ ಸೌಭಾಗ್ಯ ವಿಶಿಷ್ಟವ ಕೊಟ್ಟು
ಕಷ್ಟವ ತಿಳಿದು ಸಂತುಷ್ಟನ ಮಾಡಮ್ಮ 2

ಶ್ರೇಷ್ಠನ್ನ ಮಾಡು ಉತ್ಕøಷ್ಟ ಜ್ಞಾನವನಿತ್ತು
ಶಿಷ್ಟನೆಂದೆನಿಸಿ ಶ್ರೀಕೃಷ್ಣನ್ನ ರಾಣಿ3

ಅಜಭವ ಮೊದಲಾದ ದ್ವಿಜರಿಂದ ವಂದಿತಳೆ
ಭಜಿಸಿ ನಿನ್ನಯ ಪಾದಾಂಬುಜವ ಆಶ್ರೈಸಿದೆ 4

ದ್ವಿಜರಾಜಗಮನಳೆ ಭುಜಗಶಯನನಾದವಿಜಯವಿಠ್ಠಲನಂಘ್ರಿರಜವ ಧರಿಸುವೆ 5
********