ಕಾಖಂಡಕಿ ಶ್ರೀ ಕೃಷ್ಣದಾಸರು
ಸ್ಮರಿಸು ಮನವೇ ನೀ ಪೂರ್ಣ ಕರುಣಾಸಾಗರ ದೇವನ್ನಾ ಪ
ದಾವ ನಿಗಮಾಗಮ ಪೌರಣಿಕ ತಿಳಿಯದು ಮಹಿಮೆದಾವನ್ನ ಅವನ ನಖಕಾಂತಿಗೆ ಸರಿ ಪೊಲಿರು ಮಿತ್ರೆಂದು ಹವ್ಯವಾಹನ್ನಾ 1
ಭಕ್ತಿ ಭಾವಕ ಶಿಲ್ಕಅನುದಿನ ಬಲಿಬಾಗಿಲ ಕಾಯಿದಿಹನಾ| ಶಾಪದಿ ವಿರಹಿತ ಮಾಡಿದನಾ 2
ಹೋ ಹೋ ಎಂದು ಬಯಿವನಾ| ಎಣಿಕೆ ಇಲ್ಲದೆ ಪರಿಪರಿ ಯಿಂದಲಿ ಅಡಿಗಡಿಗೆ ರಕ್ಷಿಪನ್ನಾ 3
ಭಗದತ್ತನು ಗಜವೇರಿ ಬಾಣವ ಬಿಡಲಾಗಳೆ ಉರುವಾತನ್ನಾ | ಗೋಪಾಲರ ರಕ್ಷಿಸಲೋಸುಗ ಬೆರಳಲಿ ಗಿರಿ ಎತ್ತಿದನ್ನಾ 4
ಏಳದೆ ಗರ್ವದಿ ಕುಳಿತರೆ ದುರ್ಯೋಧನನ ಕೆಳಗೆಡಹಿದನ್ನಾ| ಶ್ರೀಲಲನೆಯ ಮನೋಭಾವನೆ ಪೂರಿತ ಮಹಿಪತಿ ನಂದನ ಜೀವನಾ 5
***