Showing posts with label ಘನ ದಯಾನಿಧಿಯಾದ guruvijaya vittala ankita suladi ಪ್ರಾಣದೇವರ ಮಹಿಮಾ ಸುಳಾದಿ GHANA DAYAANIDHIYAADA PRANADEVA MAHIMA SULADI. Show all posts
Showing posts with label ಘನ ದಯಾನಿಧಿಯಾದ guruvijaya vittala ankita suladi ಪ್ರಾಣದೇವರ ಮಹಿಮಾ ಸುಳಾದಿ GHANA DAYAANIDHIYAADA PRANADEVA MAHIMA SULADI. Show all posts

Monday, 9 December 2019

ಘನ ದಯಾನಿಧಿಯಾದ guruvijaya vittala ankita suladi ಪ್ರಾಣದೇವರ ಮಹಿಮಾ ಸುಳಾದಿ GHANA DAYAANIDHIYAADA PRANADEVA MAHIMA SULADI


madam nagaratnamma, mysuru

ರಾಗ ಮೋಹನ 
2nd Audio by Mrs. Nandini Sripad



ಮೊದಲಕಲ್ಲು ಶ್ರೀ ಶೇಷದಾಸಾರ್ಯ ವಿರಚಿತ
 ( ಗುರುವಿಜಯವಿಠ್ಠಲ ಅಂಕಿತ ) 

ಶ್ರೀ ಪ್ರಾಣದೇವರ ಮಹಿಮಾ ಸುಳಾದಿ
( ಪಿಂಡಾಂಡ ಬ್ರಹ್ಮಾಂಡದಲ್ಲಿ ಅನೇಕ ರೂಪದಿಂದ ಕಾರ್ಯ - ಕಾರಣ ರೂಪಗಳ ವರ್ಣನೆ )


ಧ್ರುವತಾಳ

ಘನದಯಾನಿಧಿಯಾದ ಪವನರಾಯನೆ ನಮೊ
ಪುನರಪಿ ನಮೋ ನಿನ್ನ ಪಾದ ಸರಸೀರುಹಕೆ 
ಮಣಿದು ಬೇಡಿಕೊಂಬೆ ನೀನೇವೆ ಗತಿ ಎಂದು 
ನಿನಗಿಂತ ಹಿತರಾರು ಜೀವನಕೆ 
ಸನಕಾದಿವಂದ್ಯನ ಆಜ್ಞಾದಿಂದಲಿ ಪರಮ 
ಅಣುಗಳಲ್ಲಿ ವ್ಯಾಪ್ತನಾಗಿ ಬಿಡದೆ 
ಅಣುರೂಪಗಳಿಂದ ನಿಂದು ಮಾಡಿದ ಕೃತ್ಯ 
ಮನಸಿಜ ವೈರಿಯಿಂದ ತಿಳಿಯಲೊಶವೆ 
ಹೀನ ಮನಸಿನಿಂದ ಬದ್ಧನಾದವ ನಾನು 
ಗುಣ-ರೂಪ-ಕ್ರಿಯೆಗಳ ವಿದಿತನೇನೊ
ತನುವಿನೊಳಗೆ ಮೂರು ಕೋಟ್ಯಧಿಕ ಎಪ್ಪತ್ತೆರಡು 
ಎನಿಪ ಸಾಸಿರ ರೂಪದಿಂದ ಸತಿಯ ಸಹಿತ 
ತೃಣ ಮೊದಲಾದ ಜೀವ - ಪ್ರಕೃತಿ - ಕಾಲ - ಕರ್ಮ 
ಅನುಸಾರವಾಗಿ ಕ್ರಿಯೆಗಳನೆ ಮಾಡಿ 
ಅನಿಮಿತ್ತ ಬಾಂಧವನೆನಿಸಿ ಸಜ್ಜನರಿಗೆ 
ಜ್ಞಾನ ಭಕ್ತ್ಯಾದಿಗಳು ನೀನೆ ಇತ್ತು 
ಮನದಲ್ಲಿ ಹರಿ ರೂಪ ಸಂದರುಶನವಿತ್ತು 
ಘನಿಭೂತವಾದ ಆನಂದದಿಂದ 
ವಿನಯದಿಂದಲಿ ಪೊರೆವ ಉಪಕಾರ -
ವನು ಸ್ಮರಿಸಲಾಪಿನೆ ಎಂದಿಗೆ ಗುಣನಿಧಿಯೆ
ಇನ ಕೋಟಿ ತೇಜ ಗುರುವಿಜಯವಿಠ್ಠಲರೇಯ 
ಇನಿತು ನಿನ್ನೊಳು ಲೀಲೆ ಮಾಡುವ ಆವಕಾಲ ॥ 1 ॥

ಮಟ್ಟತಾಳ

ಮಿನಗುವ ಕಂಠದಲಿ ಎರಡು ದಳದ ಕಮಲ 
ಕರ್ಣಿಕಿ ಮಧ್ಯದಲಿ ಸತಿಸಹಿತದಲಿದ್ದು 
ವನಜಾಸನವಿಡಿದು ತೃಣಜೀವರತನಕ 
ತನುವಿನೊಳಗೆ ವಿಹಿತವಾದ ಶಬ್ದಗಳನ್ನು 
ನೀನೇವೆ ಮಾಡಿ ಅವರವರಿಗೆ ಕೀರ್ತಿ
ಘನತೆಯನೇ ಇತ್ತು ಕಾಣಿಸಿಕೊಳ್ಳದಲೆ 
ಮನುಜಾಧಮರಿಗೆ ಮಾಯವ ಮಸಗಿಸಿ 
ಕೊನೆಗುಣದವರನ್ನ ನಿತ್ಯ ದುಃಖಗಳಿಂದ 
ದಣಿಸುವಿ ಪ್ರಾಂತ್ಯದಲಿ ಕೊನೆಮೊದಲಿಲ್ಲದಲೆ 
ದನುಜಮರ್ದನ ಗುರುವಿಜಯವಿಠ್ಠಲರೇಯ 
ನಿನಗಿತ್ತನು ಈ ಪರಿ ಸ್ವತಂತ್ರ ಮಹಿಮೆಯನು ॥ 2 ॥

ರೂಪಕತಾಳ

ನಾಶಿಕ ಎಡದಲ್ಲಿ ಭಾರತಿ ತಾನಧೋ -
ಶ್ವಾಸ ಬಿಡಿಸುವಳು ನಿನ್ನಾಜ್ಞದಿ
ನಾಶಿಕ ಬಲದಲ್ಲಿ ಈಶನಾಜ್ಞದಿ ಊರ್ಧ್ವ -
ಶ್ವಾಸ ಬಿಡಿಸಿ ಪೊರೆವಿ ಜೀವರನ್ನು 
ತಾಸಿಗೊಂಭೈನೂರು ಕ್ರಮದಿಂದ ಇಪ್ಪತ್ತೊಂದು 
ಸಾಸಿರದಾರುಶತ ದಿನವೊಂದರಲಿ 
ಭೂಶಬ್ದದಿಂದಲ್ಲಿ ಹರಿಯನ್ನೆ ಪೂಜಿಸುತ್ತ 
ಆಶೀತಿನಾಲ್ಕುಲಕ್ಷ ಜೀವರಿಗೆ
ಲೇಸು ಮಿಶ್ರಗಳೆಲ್ಲ ಅದರಂತೆ ನಿರ್ದೇಶ 
ವಾಸಗೈಸುವಿ ನೀನೆ ಪ್ರಾಂತ್ಯದಲ್ಲಿ 
ಈ ಸುಜ್ಞಾನವೆ ತಿಳಿದುಪಾಸನೆ ಮಾಳ್ಪರಿಗೆ 
ಶ್ವಾಸಮಂತ್ರದ ಫಲವಶೇಷವೀವ 
ಕಾಸಿನಿಂದಲಿ ಕೋಟಿ ದ್ರವ್ಯ ಪ್ರಾಪುತದಂತೆ 
ವಾಸುದೇವನು ಇದಕೆ ತುಷ್ಟನಾಗೀ 
ಈ ಶರೀರದಿ ಪೊಳೆದು ಕ್ಲೇಶವ ಪರಿಹರಿಪ 
ಈ ಸಂಜ್ಞದಿಂದಲ್ಲಿ ದಿವಿಜರೆಲ್ಲ 
ದಾಸರಾಗಿಹರಯ್ಯಾ ನಿನ್ನ ಪಾದವ ಬಿಡದೆ 
ಕ್ಲೇಶಾನಂದಗಳೆಲ್ಲ ನಿನ್ನಾಧೀನ 
ದೇಶ ಕಾಲ ಪೂರ್ಣ ಗುರುವಿಜಯವಿಠ್ಠಲರೇಯ 
ಭಾಸುರಜ್ಞಾನ ನಿನ್ನಿಂದಲೀವ ॥ 3 ॥

ಝಂಪೆತಾಳ

ಪಂಚದ್ವಾರಗಳಲ್ಲಿ ಪಂಚವಪುಷಗಳಿಂದ 
ಪಂಚರೂಪನ ಧ್ಯಾನ ಮಾಳ್ಪ ನಿನ್ನ 
ಪಂಚಮುಖ ಮೊದಲಾದಮರರೆಲ್ಲರು ನಿ -
ಶ್ಚಂಚಲದಿ ಭಜಿಸುತಿರೆ ಅವರವರ 
ವಾಂಛಿತಗಳನಿತ್ತು ಪರಮಮುಖ್ಯಪ್ರಾಣ ದ್ವಿ -
ಪಂಚಕರಣಕೆ ಮುಖ್ಯ ಮಾನಿ ನೀನೆ 
ಪಂಚರೂಪಗಳಿಂದ ಪಂಚಾಗ್ನಿಗತನಾಗಿ 
ಪಂಚವ್ಯಾಪಾರಗಳ ಮಾಳ್ಪ ದೇವ 
ಪಂಚಪರ್ವದಲಿಪ್ಪ ಪಂಚ ಪಂಚಮರರು ಸಂಚರಿಸುವರಯ್ಯ ನಿನ್ನಿಂದಲಿ 
ಪಂಚಭೇದಗಳರುಹಿ ಶುದ್ಧ ಶಾಸ್ತ್ರಗಳಿಂದ ಪ್ರ -
ಪಂಚ ಸಲಹಿದ ವಿಮಲ ಉಪಕಾರಿಯೆ ನಿ -
ಷ್ಕಿಂಚನಪ್ರಿಯ ಗುರುವಿಜಯವಿಠ್ಠಲರೇಯನ ಮಿಂಚಿನಂದದಿ ಎನ್ನ ಮನದಿ ನಿಲಿಸು ॥ 4 ॥

ತ್ರಿವಿಡಿತಾಳ

ದಳ ಅಷ್ಟವುಳ್ಳ ರಕ್ತಾಂಬುಜದ ಮಧ್ಯ 
ಪೊಳೆವ ಕರ್ಣಿಕೆಯಲ್ಲಿ ಶೋಭಿಸುವ 
ಮೂಲೇಶನ ಪಾದ ಪಂಕಜದಲಿ ನಿಂದು 
ಸಲೆ ಭಕುತಿಯಿಂದ ಭಜಿಸುವ ನಿನ್ನ ಚರಣ
ಮೂಲದಲ್ಲಿ ಜೀವ ಆಶ್ರಯಿಸಿ ಇಪ್ಪನಾಗಿ 
ಸ್ಥಳವ ಸೇರಿಪ ಭಾರ ನಿನ್ನದಯ್ಯಾ 
ಒಲ್ಲೆನೆಂದರೆ ಬಿಡದು ಭಕುತರ ಅಭಿಮಾನ 
ಒಲಿದು ಪಾಲಿಸಬೇಕು ಘನ ಮಹಿಮಾ 
ಖಳದರ್ಪಭಂಜನ ಗುರುವಿಜಯವಿಠ್ಠಲರೇಯ 
ಒಲಿವ ನಿಮ್ಮಯ ಕೃಪೆಗೆ ವಿಮಲಚರಿತ ॥ 5 ॥

ಅಟ್ಟತಾಳ

ಜಾಗೃತಿ ಸ್ವಪ್ನ ಸುಷುಪ್ತಿಯಲ್ಲಿ ನೀನೆ
ಜಾಗರೂಕನಾಗಿ ಜೀವರ ಪಾಲಿಸಿ 
ಭಾಗತ್ರಯದಲ್ಲಿ ವಿಭಾಗ ಮಾಡುವಿ 
ನಾಗಭೂಷಣಾದಿ ಸುರರಿಗೆ ಜೀವನ 
ಸಾಗರ ಮೊದಲಾದ ಸಕಲರಲ್ಲಿ ವ್ಯಾಪ್ತ 
ನಾಗರಾಜನ ಅಂಗುಟದಿ ಮೀಟಿದ ಶಕ್ತ
ಯುಗಾದಿ ಕೃತುನಾಮ ಗುರುವಿಜಯವಿಠ್ಠಲರೇಯನ ಯೋಗವ ಪಾಲಿಸಿ ಭವದೂರ ಮಾಡೋದು ॥ 6 ॥

ಆದಿತಾಳ

ಅಸುರರ ಪುಣ್ಯವನ್ನು ಭಕುತರಿಗಿತ್ತವರ 
ಅಸಮೀಚೀನ ಕರ್ಮ ದನುಜರಿಗುಣಿಸುವಿ 
ಈಶನೆ ಗತಿಯೆಂದು ನೆರೆ ನಂಬಿದವರಿಗೆ 
ಸುಸಮೀಚೀನವಾದ ಮೋದಗಳೀವಿ ನಿತ್ಯ 
ವಸುಧಿಯ ಭಾರವನ್ನು ಧರಿಸಿ ತ್ರಿಕೋಟಿಯ 
ಸುಶರೀರಗಳಿಂದ ಬಹಿರಾವರಣದಲ್ಲಿ 
ವಾಸವಾಗಿ ಸಕಲಭೂತ ಹೃತ್ಕಮಲದಲ್ಲಿ ನಿಂದು 
ಬಿಸಜಜಾಂಡವನ್ನು ಪೊರೆವ ಕರುಣಿ ನೀನು
ಅಸಮನೆನಿಪ ಗುರುವಿಜಯವಿಠ್ಠಲರೇಯ 
ವಶವಾಗುವನು ನಿನ್ನ ಕರುಣದಿ ಆವಕಾಲ ॥ 7 ॥

ಜತೆ

ಹರಿಯ ವಿಹಾರಕ್ಕೆ ಆವಾಸನೆನಿಸುವಿ 
ಗುರುವಿಜಯವಿಠ್ಠಲನ್ನ ಸುಪ್ರೀತ ಘನದೂತ ॥
************