Showing posts with label ಏನು ಗತಿಯೋ ಎನಗೆ ಎಲೈ ಹರಿ purandara vittala. Show all posts
Showing posts with label ಏನು ಗತಿಯೋ ಎನಗೆ ಎಲೈ ಹರಿ purandara vittala. Show all posts

Tuesday, 3 December 2019

ಏನು ಗತಿಯೋ ಎನಗೆ ಎಲೈ ಹರಿ purandara vittala

ರಾಗ ಪೂರ್ವಿ. ಅಟ ತಾಳ

ಏನು ಗತಿಯೋ ಎನಗೆ, ಎಲೈ ಹರಿ ||ಪ||
ನಾ ನಿನ್ನ ನೆನೆಯದೆ ಮೋಸ ಹೋದೆನಲ್ಲೋ ||ಅ.ಪ||

ಅಂಕದಲಾಡುವ ಶಿಶುವಿನ ಮುದ್ದಾದ
ಇಂಬಿನ ನುಡಿಗಳ ಕೇಳುತಲಿ
ಕಿಂಕಿಣಿ ಧ್ವನಿಯಿಂದ ಕಿವಿಗೊಟ್ಟು ಕೇಳುವ
ಮಂಕಾದ ಹರಿಣನಂತಾದೆನಲ್ಲೊ ಹರಿ ||

ತೊಡೆ ಕುಚ ಗುಹ್ಯ ಸೌಂದರ್ಯ ಕೊಂಡಾಡುತ
ಮಡದಿಯ ಅಂಗ ಸಂಗವ ಮಾಡುತ
ಒಡಲ ಕಿಚ್ಚಿಗೆ ಪೋಗಿ ಬಡಿಗಲ್ಲು ಕೆಡಹಿಕೊಂ-
ಡಡಗಿದ ಮೂಷಕನಂತಾದೆನಲ್ಲೊ ||

ಪರ ವನಿತೆಯರ ಲಾವಣ್ಯ ಲೋಚನದಿ ಗೋ-
ಚರಿಸಲು ಅವಳ ಕೂಟಕೆ ಬೆರೆತು
ಉರಿವ ಕಿಚ್ಚನು ಹಿತವೆಂದು ಬಂದದರೊಳು
ಎರಗಿದ ಪತಂಗದಂತಾದೆನಲ್ಲೊ ||

ಸಲೆ ನಿಜ ವೃತ್ತಿಯ ಜರೆದು ಪರಾನ್ನವ
ನಲಿದುಂಡು ಹೊಟ್ಟೆಯ ಹೊರೆಯುತಲಿ
ಬಲೆಯ ತುದಿಯಲ್ಲಿದ್ದ ಮಾಂಸಕೆ ಮೋಹದಿ
ಸಿಲುಕಿದ ಮೀನಿನಂತಾದೆನಲ್ಲೊ ||

ಲಂಪಟನಾಗಿ ನಾರಿಯರ ಮುಖಾಬ್ಜದ
ಇಂಪನು ಕಣ್ಣಿಂದ ನಾ ನೋಡುತ
ಸಂಪಿಗೆ ಅರಳಿನ ಮೇಲೆರಗಿರುವಂಥ
ಸಂಪಾಳಿ ಅಳಿಗಳಂತಾದೆನಲ್ಲೊ ||

ಇನ್ತು ಪಂಚೇಂದ್ರಿಯಗಳು ಒಳ ಹೊರಗೆ
ಸಂತತ ಎನ್ನನು ಎಳೆಯುತಿರೆ
ಸಂತೈಸಲಾಗದೆ ಸ್ಮರನವರೊಶವಾದ
ಕಾಂತೆಯರರಸನಾದೆನಲ್ಲೊ ಹರಿ ||

ಮಂದನು ನಾನು ಮದನನ ಗೆಲಿದು, ಪನ್ನ್ಚ
ಇಂದ್ರಿಯಂಗಳ ನಾನು ಜಯಿಸಲಾರೆ
ತಂದೆ ಪುರಂದರ ವಿಟ್ಟಲ ನೀನೊಲಿದಡೆ
ಹಿಂದಿನಾ ಭವ ಬಾರದಲ್ಲೊ ಹರಿ ||
***

pallavi

Enu gatiyO enage elai hari

anupallavi

nA ninna neneyade mOsa hOdenallO

caraNam 1

angadalADuva shishuvina muddAda imbina nuDigaLa kELutali
kinkiNi dhvaniyinda kivi koTTu kELuva mankAda hariNanadAdenallo hari

caraNam 2

toDe kuca guhya saundarya koNDADuta maDadiya anga sangava mADuta
oDala kiccige pOgi baDigallu keDahi koNDDgida mUSakanentAdenallo hari

caraNam 3

para vaniteyara lAvaya lOcanadi gOcarisalu avaLa kUDake peredu
uriva kiccanu hitavendu bandadharoLu eragida patangadantAdenallo hari

caraNam 4

sale njia vrttiya jaredu parAnnava naliduNDu hoTTeya horeyutali
baleya tudiyallidda mAmasake mOhadi silukida mIninendAdenallo hari

caraNam 5

lampaTanAgi nAriyara mukhAbjada imbanu kaNNInda nA nODuta
sampige araLina mEleragiruvantha sampALi aLigaLantAdenallo hari

caraNam 6

intu pancEndriyagaLu oLa horage santata ennanu eLeyutire
santaisalAgade smaranavaroshavAda kAnteyara rasanAdenallo hari

caraNam 7

mandanu nAnu madanana gelidu pannca indriyangaLa nAnu jayisalAre
tande purandara viTTala nInolidaDe hindinA bhava bAradallo hari
***