Showing posts with label ಳಳ- RSS- ಭರತ ದೇಶದಿ ಮರಳಿ BHARATA DESHADI MARALI rss. Show all posts
Showing posts with label ಳಳ- RSS- ಭರತ ದೇಶದಿ ಮರಳಿ BHARATA DESHADI MARALI rss. Show all posts

Friday, 24 December 2021

ಭರತ ದೇಶದಿ ಮರಳಿ others BHARATA DESHADI MARALI rss


 RSS song  


ಭರತ ದೇಶದಿ ಮರಳಿ ನಡೆಯಲಿ ಶೌರ್ಯ ಸಾಹಸದರ್ಚನೆ

ಹೆಮ್ಮೆ ಸಾರುತ ಚಿಮ್ಮಿ ಹೊಮ್ಮಲಿ ಸಿಂಹ ವಿಕ್ರಮ ಘರ್ಜನೆ || ಪ ||


ಪರಮ ಪುರುಷನ ರಾಮಚಂದ್ರನ ಸೂರ್ಯಕುಲ ಸಂತಾನರೆ

ಶುದ್ಧ ರಕ್ತದ ಕ್ಷಾತ್ರ ತೇಜದ ಧೀರ ಪೌರುಷವಂತರೆ

ಶೂರ ವೀರನು ಪೌರವಾರ್ಯನು ಶಕ್ತಿ ಬಿತ್ತಿಹ ನೆಲವಿದು

ಪುರುಷ ಸಿಂಹನು ಪೃಥ್ವಿರಾಜನು ನೆತ್ತರಿತ್ತಿಹ ನಾಡಿದು || ೧ ||


ಮಾನಕಾಗಿಯೇ ಬಾಳಿ ಬದುಕಿದ ಜಾತಿವಂತರ ತೌರಿದು

ಮಾತಿಗಾಗಿಯೆ ಬಲಿಯ ನೀಡಿದ ನೀತಿವಂತರ ನೆಲೆಯಿದು

ತುಂಡು ಭೂಮಿಗೆ ಕೋಡಿ ನೆತ್ತರ ಹರಿಸಿದೊಡೆಯರ ಬೀಡಿದು

ಮಣ್ಣಿಗಾಗಿಯೇ ಮಣ್ಣುಗೂಡಿದ ತ್ಯಾಗಿ ಮಕ್ಕಳ ಮನೆಯಿದು || ೨ ||


ದವಸ ಧಾನ್ಯದಿ ನೀರು ನೆಲದಲಿ ಕೆಚ್ಚಿನಚ್ಚರಿ ತುಂಬಿದೆ

ದೇಶವಿದರೊಳು ಗಾಳಿ ಬೆಳಕೊಳು ಸಚ್ಚರಿತೆ ಬೇರೂರಿದೆ

ಇಲ್ಲಿ ಜನಿಸಿದ ಹುಲ್ಲೆ ಹಸುಗಳು ಹುಲಿಯ ಹೆದರಿಸ ಬಲ್ಲವು

ಜನರನೆದುರಿಸೆ ಬೆದರದಿರುವುದೆ ತುಂಬಿದೀ ಜಗವೆಲ್ಲವು || ೩ ||


ಒಂದೇ ಮಾತೆಯ ಹಿಂದು ಮಕ್ಕಳು ಬಂಧು ಭಾವವ ಹೊಂದಿರೆ

ದಾಸ್ಯದೊಡಲೊಳು ಮೇಲಕೆದ್ದಿರಲು ಅರುಣಕಾಂತಿಯ ಹೊಂದಿರೆ

ಏಳಿರೇಳಿರಿ ಸಹಜ ರೂಪದ ಶೌರ್ಯದುರಿ ಮೈ ತಾಳಿರಿ

ವಿಶ್ವದೊಡೆಯರದಾರು ಎನ್ನುವ ಪ್ರಶ್ನೆಗುತ್ತರ ಹೇಳಿರಿ || ೪ ||

***