Showing posts with label ನಾಮತ್ರಯ ನೆನೆಯಿರೊ ಕಾಮಕ್ರೋಧವು vijaya vittala. Show all posts
Showing posts with label ನಾಮತ್ರಯ ನೆನೆಯಿರೊ ಕಾಮಕ್ರೋಧವು vijaya vittala. Show all posts

Wednesday, 16 October 2019

ನಾಮತ್ರಯ ನೆನೆಯಿರೊ ಕಾಮಕ್ರೋಧವು ankita vijaya vittala

ನಾಮತ್ರಯ ನೆನೆಯಿರೊ
ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ||pa||

ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ
ದುಶ್ಚರಿತವೆಂಬ ಮಹ ಕಾನನಕ್ಕೆ
ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ
ನಿಚ್ಚಳವಾಗಿದ್ದ ಸುಜ್ಞಾನ  ಪಾಲಿಪದು||1||

ಅನಂತ ಅನಂತ ಎಂದು ಮನದಲ್ಲಿ ನೆನೆಯೆ
ನಾನಾ ಭವಬಂಧ ದುಷ್ಕರ್ಮದಿ
ಹೀನಾಯವನು ಕಳೆದು ಹಿತದಿಂದಲಿ ವೊಲಿದು
ಆನಂದ ಆನಂದವಾದ ಫಲ ಕೊಡುವುದು. ||2||

ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ
ಗೋವಿಂದ ಕಡೆಹಾಕಿ ಸಾಕುವದು
ದೇವೇಶ ಶಿರಪತಿ ವಿಜಯವಿಠ್ಠಲೇಶನ
ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು ||3||
***

Namatraya neneyirokamakrodhavu
Haridu bailagi poguvudu ||pa||

“acyuta acyuta” endu smaraneyanu madidare
Duscharitavemba maha kananakke
Kiccagi dahisuvudu nimishadolage Suddha
Niccalavagidda suj~jana palipadu||1||

“ananta ananta”endu manadalli neneye
Nana Bavabandha dushkarmadi
Hinayavanu kaledu hitadindali volidu
Ananda anandavada Pala koduvudu||2||

“govinda govinda” endu dhyanava made
Govinda kadehaki sakuvadu
Devesa Sirapati vijayaviththalesana
Seve satkaryadali paripurnavagihudu ||3||
****