Wednesday, 16 October 2019

ನಾಮತ್ರಯ ನೆನೆಯಿರೊ ಕಾಮಕ್ರೋಧವು ankita vijaya vittala

ರಾಗ - : ತಾಳ -

ನಾಮತ್ರಯ ನೆನೆಯಿರೊ 
ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ll ಪ ll 

ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ 
ದುಷ್ಚರಿತವೆಂಬ ಮಹ ಕಾನನಕ್ಕೆ 
ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ 
ನಿಚ್ಚಳವಾಗಿದ್ದ ಸುಜ್ಞಾನ ಪಾಲಿಪದು ll ೧ ll

ಅನಂತ ಅನಂತ ಎಂದು ಮನದಲ್ಲಿ ನೆನಯೆ 
ನಾನಾ ಭವಬಂಧ ದುಷ್ಕರ್ಮದಿ 
ಹೀನಾಯವನು ಕಳೆದು ಹಿತದಿಂದಲಿ ವೊಲಿದು 
ಆನಂದ ಆನಂದವಾದ ಫಲ ಕೊಡುವುದು ll ೨ ll 

ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ 
ನೋವಿಂದ ಕಡೆಹಾಕಿ ಸಾಕುವದು
ದೇವೇಶ ಶಿರಿಪತಿ ವಿಜಯವಿಟ್ಠಲೇಶನ 
ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು ll ೩ ll
***


Namatraya neneyirokamakrodhavu
Haridu bailagi poguvudu ||pa||

“acyuta acyuta” endu smaraneyanu madidare
Duscharitavemba maha kananakke
Kiccagi dahisuvudu nimishadolage Suddha
Niccalavagidda suj~jana palipadu||1||

“ananta ananta”endu manadalli neneye
Nana Bavabandha dushkarmadi
Hinayavanu kaledu hitadindali volidu
Ananda anandavada Pala koduvudu||2||

“govinda govinda” endu dhyanava made
Govinda kadehaki sakuvadu
Devesa Sirapati vijayaviththalesana
Seve satkaryadali paripurnavagihudu ||3||
****

ನಾಮತ್ರಯ ನೆನೆಯಿರೊ
ಕಾಮಕ್ರೋಧವು ಹರಿದು ಬೈಲಾಗಿ ಪೋಗುವುದು ||pa||

ಅಚ್ಯುತಾ ಅಚ್ಯುತಾ ಎಂದು ಸ್ಮರಣೆಯನು ಮಾಡಿದರೆ
ದುಶ್ಚರಿತವೆಂಬ ಮಹ ಕಾನನಕ್ಕೆ
ಕಿಚ್ಚಾಗಿ ದಹಿಸುವುದು ನಿಮಿಷದೊಳಗೆ ಶುದ್ಧ
ನಿಚ್ಚಳವಾಗಿದ್ದ ಸುಜ್ಞಾನ  ಪಾಲಿಪದು||1||

ಅನಂತ ಅನಂತ ಎಂದು ಮನದಲ್ಲಿ ನೆನೆಯೆ
ನಾನಾ ಭವಬಂಧ ದುಷ್ಕರ್ಮದಿ
ಹೀನಾಯವನು ಕಳೆದು ಹಿತದಿಂದಲಿ ವೊಲಿದು
ಆನಂದ ಆನಂದವಾದ ಫಲ ಕೊಡುವುದು. ||2||

ಗೋವಿಂದ ಗೋವಿಂದ ಎಂದು ಧ್ಯಾನವ ಮಾಡೆ
ಗೋವಿಂದ ಕಡೆಹಾಕಿ ಸಾಕುವದು
ದೇವೇಶ ಶಿರಪತಿ ವಿಜಯವಿಠ್ಠಲೇಶನ
ಸೇವೆ ಸತ್ಕಾರ್ಯದಲಿ ಪರಿಪೂರ್ಣವಾಗಿಹುದು ||3||
***

No comments:

Post a Comment