Showing posts with label ಮುನಿಗಳು ಮನದೊಳು ಕ್ಷಣಬಿಡದಲೆ ನಿನ್ನ uragadrivasa vittala. Show all posts
Showing posts with label ಮುನಿಗಳು ಮನದೊಳು ಕ್ಷಣಬಿಡದಲೆ ನಿನ್ನ uragadrivasa vittala. Show all posts

Monday, 2 August 2021

ಮುನಿಗಳು ಮನದೊಳು ಕ್ಷಣಬಿಡದಲೆ ನಿನ್ನ ankita uragadrivasa vittala

 ಮುನಿಯುವರೇ ಕೃಷ್ಣಾ ಮುನಿಯುವರೆ ಪ

ಮುನಿಗಳೆಲ್ಲರು ನಿನ್ನಮನೆಯವರೇನೊ

ದಣಿಸಲಾಗದೊ ನಿನ್ನ ನೆನೆವ ಭಕುತರೊಳು ಅ.ಪ

ಮುನಿಗಳು ಮನದೊಳು ಕ್ಷಣಬಿಡದಲೆ ನಿನ್ನ

ದಣಿಸಿ ಕುಣಿಸುವರೊ ಮೌನದಿಂದಲಿ ನಾ

ಮಣಿದು ಬೇಡುವೆ ಬರಿದೆ ಹಣಿದು ಬಿಸುಡುವರೆ

ಕೆಣಕಿದವರ ನೀ ಕ್ಷಣದಿ ಕಾಪಾಡಿದೆ 1


ಬಲಿಯ ಯಾಚಿಸಿ ಭಕ್ತಿಬಲೆಗೆ ನೀ ಸಿಲುಕಿದೆ

ಶಿಲೆಯನೊತ್ತಿ ಸುಶೀಲೆಯ ಪೊರೆದೆ

ಜಲಧಿಶಯನಾ ನೀ ರಥಕೆ ಸಾರಥಿಯಾದೆ

ಛಲವೇತಕೆನ್ನೊಳು ನೀನೆ ಗತಿ ಎಂದರೆ2


ಎಂಜಲಾಸೆಗೆ ಸೋತು ಶಬರಿಯ ಪೊರೆದೆ

ಸಂಜೆ ಹಗಲೆನ್ನದೆ ಎಂಜಲ ಬಳಿದೆ

ಅಂಜದೆ ಅಜಾಮಿಳಗೊಲಿದೆಯೋದೇವ

ಅಂಜೆನೊ ಎಂದಿಗೂ ಕುಂಜರವರದಾ 3


ಶಪಥಮಾಡಿ ನಿನ್ನ ಪಂಥವ ಕೆಡಿಸಲು

ಕುಪಿತನಾಗಲಿಲ್ಲ ಕುರುಪಿತಾಮಹನೊಳು

ಆಪ್ತನಿಮಿತ್ತಬಾಂಧವನೆಂದು ನಿನ್ನ

ಪ್ರಾಪ್ತಿಯ ಬೇಡಲು ಬಂದುದಕೆ ಈಗ 4


ಶಂಕಿಸಿ ಈ ಪರಿ ಅಂಕಿತ ಪೇಳದೆ

ಬಿಂಕತನದಲಿ ಕಾಲವ ಕಳೆದೆ

ಶಂಕರನುತ ಶ್ರೀ ವೇಂಕಟೇಶ ನಿನ್ನ

ಕಿಂಕರನೆನಿಸೆನ್ನ ಸಂಕಟ ಹರಿಸೂ5

****