..
ಪಾಲಿಸೋ ಶ್ರೀ ಗುರುರಾಯಾ ಪ
ಪಾಲಿಸೋ ಪಾವನ್ನ ಕಾಯ - ಭವ
ಜಾಲ ತಪ್ಪಿಸೊ ಮಹರಾಯ - ಆಹಾ
ಪಾಲಗು ಜನರ ಸು - ಪಾಲಕ ಹರಿಪಾದ
ಲೋಲ ಶ್ರೀಕರ ಭವ - ತೂಲಕಾನಲನೆ ಅ.ಪ
ಶೇಷಾಂಶ ಪ್ರಹ್ಲಾದ ವ್ಯಾಸಾ - ಮುನಿ
ವೇಷ ತಾಳಿದೆಯೊ ಯತೀಶಾ - ಜಾಗು
ಪೋಷಣೆ ಗೈಯ್ಯೊ ಮನೀಷಾ - ಎನ್ನಾ -
ಶೇಷ ಕ್ಲೇಶವಳಿದೀಶಾ - ಆಹಾ
ಶೋಷದ ಭವ ನಿ -
ಸ್ಸೇಷ ಮಾಡಿ ಎನ್ನ
ಪೋಷಿಸೊ ನಿರುತ ಧೃ -
ತಾಷಾಢ ಗುರುವರ 1
ಕಾಮಧೇನು ಕಲ್ಪವೃಕ್ಷಾ - ನಿನ್ನ
ಈ ಮಹಮಹಿಮೆ ನಿರೀಕ್ಷಾ - ಮಾಡಿ
ಈ ಮಹಿ ಯಾಕೆಂದುಪೇಕ್ಷಾ - ಮಾಡಿ
ಧಾಮ ಸೇರಿದವೊ ಭಕ್ತಪಕ್ಷಾ - ಆಹಾ
ಸಾಮಜನಾಥನ
ಪ್ರೇಮ ಪಾತ್ರನೆ ನಿನ್ನ
ಈ ಮಹ ಮಹಿಮೆಗೆ
ನಾಮಾಳ್ಪೆ ನಮೊ ನಮೊ 2
ಆಸೇತು ಹಿಮಾದ್ರಿ ತನಕಾ - ನಿನ್ನ
ಆಸೆಯ ಮಾಳ್ಪರನೇಕಾ - ಅಂಥ
ದಾಸಜನರಿಗೆ ಅನೇಕಾ - ಫಲ
ರಾಶಿಯ ಕೊಡುವಿ ಮಜ್ಜನಕಾ - ಆಹಾ
ಹೇಸಿ ಮಾನವ ಜನ್ಮ
ಈಸೆ ಸಾಕೆಲೊ ಸ್ವಾಮಿ
ಎಸು ಪೇಳಲಿ ನಿನ್ನ
ದಾಸರ ದಾಸನೋ 3
ಎಲ್ಲಿ ಪೋದರು ಕಾಯ್ವರಿಲ್ಲ - ಜಗ -
ದ್ವಲ್ಲಭ ಬಲ್ಲಿ ನಿನೆಲ್ಲಾ - ಬಹು
ಬಲ್ಲಿದನೆಂಬುವರೆಲ್ಲಾ - ಜನ
ಸೊಲ್ಲು ಕೇಳಿಬಂದೆನಲ್ಲಾ - ಆಹಾ
ಪುಲ್ಲಲೋಚನ ನೀ -
ನಲ್ಲದೆ ಎನ ಭವ
ಣೆಲ್ಲ ಮಾತ್ರವು ಕಳೆಯೊ -
ರಿಲ್ಲವೊ ಎನ್ನಜೀಯಾ 4
ನಾಥ ನಿನ್ನೊಳು ಜಗಕೆಲ್ಲ - ಮಹ
ಪ್ರೀತಿಯು ಇರುತಿಹುದಲ್ಲ - ಸದ -
ತಾತ ನೀನಾಗಿ ಜಗಕೆಲ್ಲಾ - ಮತ್ತೆ
ಪೂತ ಫಲ ಕೊಡುವಿಯಲ್ಲಾ - ಆಹಾ
ವಾತದೇವನ ಸಹ - ದಾತ ಗುರುಜಗ -
ನ್ನಾಥವಿಠಲ ಸದಾ ಪ್ರೀತಿಂದ ಇರುವೊನು5
***