Showing posts with label ಸಾಧ್ಯವಲ್ಲವು ಮುಕುತಿ ಸಾಧ್ಯವಲ್ಲವುಶುದ್ಧ prasannavenkata. Show all posts
Showing posts with label ಸಾಧ್ಯವಲ್ಲವು ಮುಕುತಿ ಸಾಧ್ಯವಲ್ಲವುಶುದ್ಧ prasannavenkata. Show all posts

Monday, 18 November 2019

ಸಾಧ್ಯವಲ್ಲವು ಮುಕುತಿ ಸಾಧ್ಯವಲ್ಲವುಶುದ್ಧ ankita prasannavenkata

by ಪ್ರಸನ್ನವೆಂಕಟದಾಸರು
ಸಾಧ್ಯವಲ್ಲವು ಮುಕುತಿ ಸಾಧ್ಯವಲ್ಲವುಶುದ್ಧ ಸಾತ್ವಿಕನಾಗಿ ತತ್ವಸಿದ್ಧ ಶೀಲರವೆರಸದಿರಲು ಪ.

ಇಷುಭೇದವ ತಾನರಿತು ಸಂತತವಿಷ್ವಕ್ಸೇನನ ಅಂಕವಿಧದೊಳೆಸೆವ ಶ್ರದ್ಧೆಯ ತೋರಿ ಋತುಗಳಗಸಣೆಗಂಜದೆ ಶಶಿಮತನಾಗದೆ 1

ಕಕುಭಬದ್ಧನೆನಿಸಿ ಹರಿವಿನಾನಿಖಿಳವಿಷಯಂಗಳ ಮನ್ನಿಸದಖಿಳ ರಾಮಕರ ತತ್ವವ ಜಪಿಸಿಅಕಳಂಕಮತ ಗುಣಧಿಯ ನಂ¨ದೆ 2

ಪರನಾರಿಯರಿಗೊಮ್ಮೆ ಮನಸೋತಿರದೆ ಚಿತ್ತದ ಹರಿಯಂ ಮುರಿದುಗುರುಪೂರ್ಣಜ್ಞಾಜÕದಿ ಪ್ರಸನ್ನವೆಂಕಟಅರಸನ ಚರಣವ ಸ್ಮರಿಸದೆ ಬರಿದೆ 3
*******