Showing posts with label ವಾಣಿ ಪರಮ ಕಲ್ಯಾಣಿ ವಾರಿಜೋದ್ಭವನ vijaya vittala. Show all posts
Showing posts with label ವಾಣಿ ಪರಮ ಕಲ್ಯಾಣಿ ವಾರಿಜೋದ್ಭವನ vijaya vittala. Show all posts

Wednesday, 16 October 2019

ವಾಣಿ ಪರಮ ಕಲ್ಯಾಣಿ ವಾರಿಜೋದ್ಭವನ ankita vijaya vittala

ವಿಜಯದಾಸ
ವಾಣೀ ಪರಮ ಕಲ್ಯಾಣಿ - ವಾರಿಜೋದ್ಭವನ
ರಾಣೀ ನಾರೀ ಶಿರೋಮಣಿ ಪ

ಕ್ಷೋಣಿಯೊಳಗೆ ಸರಿಗಾಣೆನೆ ನಿನಗೆ ಸು-
ಪ್ರಾಣಿಯೆ ಹರಿಪದರೇಣು ಧರಿಪೆ ಸದಾ ಅ. ಪ.

ಸರಸ್ವತಿ ನಿತ್ಯಾಸಾವಿತ್ರಿ ದೇವಿ ಗಾಯತ್ರಿ
ಸರಸಿಜದಳ ಸುನೇತ್ರಿ
ನಿಕರ ಸ್ತೋತ್ರಿ - ಶೋಭನಗಾತ್ರಿ
ಕರುಣಾಸಾಗರೆ ಪವಿತ್ರಿ
ಚರಣದಂದಿಗೆ ಪಂಚ ಬೆರಳು ಭೂಷಣ ಧ್ವನಿ
ಸರವು ಕನಕ ಗೆಜ್ಜೆ ಸರಪಳಿ ಪೊಳೆವಾಂ-
ಬರಧರೆ ಸುಂದರಿ ಎರಗುವೆ ಎನ್ನನು
ಎರವು ಮಾಡದೆ ತ್ರಿಕರಣ ಶುಧ್ಧನೆ ಮಾಡೆ 1

ಸರ್ವರಾತ್ಮಕೆ ಪ್ರಖ್ಯಾತೆ-ಧವಳಗೀತೆ
ಸರ್ವರಿಗೆ ಮಹಾ ಪ್ರೀತೆ
ನಿರ್ವಾಹವಂತೆ ಪತಿವ್ರತೆ ನಿರ್ಮಲ ಚರಿತೆ
ಪೂರ್ವದೇವತೆ ಹರಿಜಾತೆ
ಉರ್ವಿಯೊಳಗೆ ಮದಗರ್ವದ ಮತಿನಾ-
ನೋರ್ವನಲ್ಲದೆ ಮತ್ತೋರ್ವನ ಕಾಣೆನು
ಪೂರ್ವಜನ್ಮದ ಪಾಪ ಪರ್ವತದಂತಿದೆ
ನಿರ್ವಾಹವನುಮಾಡೆ ದೂರ್ವಾಂಕುರದಿ 2

ನಿಗಮಾಭಿಮಾನಿ ಸುಜ್ಞಾನಿ
ಅಗಣಿತ ಫಲದಾಯಿನಿ
ಝಗಝಗಿಸುವ ಕರಯುಗಳ ಭೂಷಣ ಪ -
ನ್ನಗವೇಣಿ ಕುಂಕುಮ ಮೃಗಮದ ವೊಪ್ಪಲು
ಜಗತ್ಪತಿ ಪ್ರದ್ಯುಮ್ನ ವಿಜಯವಿಠ್ಠಲನಮಗಳೆ ಸುಖಾತ್ಮಕೆ ಜಗದಿ ಶುಶ್ರೋಣೆ 3
**********