Showing posts with label ಏನು ಗತಿಯೊ ರಂಗ ನಾ ನಿನ್ನವನಾಗಿ prasannavenkata. Show all posts
Showing posts with label ಏನು ಗತಿಯೊ ರಂಗ ನಾ ನಿನ್ನವನಾಗಿ prasannavenkata. Show all posts

Sunday, 10 November 2019

ಏನು ಗತಿಯೊ ರಂಗ ನಾ ನಿನ್ನವನಾಗಿ ankita prasannavenkata

 by ಪ್ರಸನ್ನವೆಂಕಟದಾಸರು
ಏನು ಗತಿಯೊ ರಂಗ ನಾ ನಿನ್ನವನಾಗಿಜ್ಞಾನದಂತಿರಲಿಲ್ಲವೊ ಪ.

ಉಂಡುಂಡುತುಡುಗಕೋಣನಪರಿಸೊಕ್ಕಿದೆಕಂಡಲ್ಲಿ ಕುಳಿತೆ ನೊಣನ ತೆರದಿಭಂಡು ಭೂತದ ಮಾತನಾಡಿ ಭಂಡನಾದೆಪುಂಡರೀಕಾಕ್ಷನನ್ನಂಥ ಪಾತಕಿಗೆ1

ಬಲು ಶಾಸ್ತ್ರಶ್ರವಣೆಂಬುವ ಮಳೆಗರೆದರೇನುಕಲುಗುಂಡಿನಂತೆ ಕೆಟ್ಟೆದೆ ತೊಯ್ಯದುಹಲವು ಅಧ್ಯಾತ್ಮವನುಸುರೇನು ಚಿತ್ತದಕಳವಳಿ ನಿಲಿಸಲಾರದ ಪಾಮರಗೆ 2

ಭವಸುಖ ಉಂಬಾಗ ನೋವು ಬೇವಾದಾಗತವಕದಿ ನುಡಿವಾಗ ಕನಸಿನಾಗಅವಿರಳಅಚ್ಯುತನಿನ್ನಂಘ್ರಿ ನೆನೆದೀಶಅವಸರಕೊದಗೆಂದೆ ಪ್ರಸನ್ವೆಂಕಟೇಶ 3
********